Asianet Suvarna News Asianet Suvarna News

ದಲಿತ ಸಿಎಂ ಆದ್ರೆ ನನಗೆ ಖುಷಿ ಎಂಬ ಸಿದ್ದರಾಮಯ್ಯ, ಬಿಜೆಪಿ ಟಾಂಗ್..!

Nov 10, 2021, 2:59 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 10): ದಲಿತ ಸಿಎಂ ಆದ್ರೆ ನನಗೆ ಖುಷಿ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ ಟಾಂಗ್ ನೀಡಿದೆ. ' ಸಿದ್ದರಾಮಯ್ಯ ಅವರಿಗೆ ದಲಿತ ಪರ ಕಾಳಜಿ ಇದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಾವು ಆಗ್ರಹಿಸಿದ್ದೆವು. ಆದರೆ ಸಿದ್ದರಾಮಯ್ಯ ಇಲ್ಲಿಯೂ ಬುರುಡೆ ಬಿಟ್ಟಿದ್ದಾರೆ. ದಲಿತರು ಸಿಎಂ ಆದರೆ ಸ್ವಾಗತವಂತೆ. ಆದರೆ ಅವರೂ ದಲಿತರಂತೆ ! ಹಾಗಾದರೆ, ಸಿದ್ದರಾಮಯ್ಯ ಏನು ಹೇಳಿದಂತಾಯ್ತು? ಎಂದು ಬಿಜೆಪಿ ಪ್ರಶ್ನಿಸಿದೆ. 

ಬಿಟ್‌ ಕಾಯಿನ್ ಹಗರಣದ ಬಗ್ಗೆ ದಾಖಲೆ ಏನಿದೆ..? ಸಿದ್ದುಗೆ ಸಿಎಂ ಪ್ರಶ್ನೆ

ಸಿದ್ದರಾಮಯ್ಯನವರೇ, ನೀವು ಪರೋಕ್ಷವಾಗಿ ಏನನ್ನು ಸ್ಥಾಪಿಸಲು ಹೊರಟಿದ್ದೀರಿ? ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ ಎಂದು ಹೇಳುವ ಮೂಲಕ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸಿದಂತಾಯ್ತು.  ನಿಮ್ಮ ಈ ಸ್ವಾರ್ಥ ಜನರಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ? ಎಂದು ಟಾಂಗ್ ನೀಡಿದೆ.