ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆ ಏನಿದೆ..? ಸಿದ್ದುಗೆ ಸಿಎಂ ಪ್ರಶ್ನೆ
ರಾಜ್ಯಾದ್ಯಂತ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ಹಗರಣದ ಮೇಲೆ ಪಿಎಂಓ ಕಚೇರಿ ನಿಗಾ ವಹಿಸಿದೆ.
ಬೆಂಗಳೂರು (ನ. 10): ರಾಜ್ಯಾದ್ಯಂತ ಬಿಟ್ ಕಾಯಿನ್ (BitCoin) ಹಗರಣ ಭಾರೀ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ಹಗರಣದ ಮೇಲೆ ಪಿಎಂಓ ಕಚೇರಿ ನಿಗಾ ವಹಿಸಿದೆ.
ಬಿಟ್ ಕಾಯಿನ್ ಹಗರಣದ ಮೇಲೆ ಪಿಎಂಒ ಕಚೇರಿ ನಿಗಾ
ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 'ಯಾರಿಂದ, ಯಾರಿಗೆ ಹಣ ವರ್ಗಾವಣೆಯಾಗಿದೆ.? ಸಾಕ್ಷ್ಯಾಧಾರ ಇಟ್ಟುಕೊಂಡು ಮಾತನಾಡಬೇಕು, ಸುಮ್ಮನೆ ಗೂಬೆ ಕೂರಿಸುವುದು ಬೇಡ, ಯಾರು ಎಷ್ಟೇ ದೊಡ್ಡವರಾದರೂ ತನಿಖೆ ನಿಲ್ಲುವುದಿಲ್ಲ' ಎಂದು ಬೊಮ್ಮಾಯಿ ಪ್ರತ್ಯತ್ತರ ನೀಡಿದ್ದಾರೆ.