Asianet Suvarna News Asianet Suvarna News

BitCoin Scam: ಬೊಮ್ಮಾಯಿಗೆ ಮೋದಿ ಅಭಯ, ಸಿಎಂ ಕುರ್ಚಿ ಎಷ್ಟು ಸೇಫ್..?

- ಜಪ್ತಾದ ಬಿಟ್‌ಕಾಯಿನ್‌ ಎಲ್ಲಿ: ಪ್ರಿಯಾಂಕ್‌ ಪ್ರಶ್ನೆ 

- 5000 ಬಿಟ್‌ಕಾಯಿನ್‌ ನೀಡಿದ್ದಾಗಿ ಶ್ರೀಕಿ ಹೇಳಿಕೆ,  186 ಸಿಕ್ಕಿದೆ ಎಂದ ಪೊಲೀಸ್‌

 

 

ಬೆಂಗಳೂರು (ನ, 13): ಬಿಟ್ ಕಾಯಿನ್ ಹಗರಣ  (Bitcoin Scam) ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸುಮಾರು 2500 ಕೋಟಿ ರು. ಮೌಲ್ಯದ ಆರ್ಥಿಕ ಅಪರಾಧ ಮತ್ತು ದೇಶದ ಮೊಟ್ಟಮೊದಲ ಕ್ರಿಪ್ಟೋಕರೆನ್ಸಿ ಹಗರಣವೆನಿಸಿದ ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿರುವ ಬಿಟ್‌ ಕಾಯಿನ್‌ಗಳು ಎಲ್ಲಿಗೆ ಹೋದವು ಎಂದು ಮಾಜಿ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

NewsHour: ಬಿಡದ ಬಿಟ್ ಕಾಯಿನ್ ಭೂತ, ಜನವರಿಯಲ್ಲೇ ಶ್ರೀಕಿ ಹೇಳಿದ್ದ ಕಟು ಸತ್ಯ!

ನಿಮ್ಮ ಮೇಲಿರುವ ಬಿಟ್‌ ಕಾಯಿನ್‌ ಆರೋಪ ಸುಳ್ಳು ಎಂದು ತನಿಖೆಯಿಂದ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೇಳಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಟ್‌ ಕಾಯಿನ್‌ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ. ಇದು ಹೆಚ್ಚು ಕಾಲ ನಡೆಯುವುದಿಲ್ಲ. ನಾವು 100 ಪರ್ಸೆಂಟ್‌ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

 

Video Top Stories