BitCoin Scam: ಬಿಜೆಪಿಯ ಕೆಲ ನಾಯಕರ ಬಗ್ಗೆ ಅಮಿತ್‌ ಶಾಗೆ ಸಿಎಂ ದೂರು

ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯ ಕೆಲ ಮುಖಂಡರ ವರ್ತನೆ ಬಗ್ಗೆ ಸಿಎಂ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. 
 

First Published Nov 12, 2021, 11:21 AM IST | Last Updated Nov 12, 2021, 11:45 AM IST

ಬೆಂಗಳೂರು (ನ. 12): ಬಿಟ್ ಕಾಯಿನ್ (BitCoin) ಹಗರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯ ಕೆಲ ಮುಖಂಡರ ವರ್ತನೆ ಬಗ್ಗೆ ಸಿಎಂ ಬೊಮ್ಮಾಯಿ (CM Bommai) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರಿಗೆ ದೂರು ನೀಡಿದ್ದಾರೆ. 

News Hour : ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?

ವಿಪಕ್ಷಗಳ ಮುಖಂಡರಿಗಿಂತ ನಮ್ಮ ಪಕ್ಷದ ಕೆಲವರೇ ಅತ್ಯುತ್ಸಾಹ ತೋರುತ್ತಿದ್ದಾರೆ. ಸಿಎಂ ಬದಲಾವಣೆ ಕುರಿತು ವದಂತಿ ಹಬ್ಬಿಸುತ್ತಿದ್ದಾರೆ. ಇಂತವರನ್ನು ನಿಯಂತ್ರಿಸಿ ಎಂದು ಮನವಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಯನ್ನು ಬೇಟಿ ಮಾಡಲು ದೆಹಲಿಗೆ ಹಾರಿದ್ದು, ಇದೇ ವೇಳೆ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಸ್ವಪಕ್ಷೀಯರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.