News Hour; ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?
* ಕರ್ನಾಟಕದಲ್ಲಿ ಬಿಟ್ ಕಾಯಿನ್ ಪ್ರಕರಣದ್ದೇ ಸದ್ದು
* ಬಿಟ್ ಕಾಯಿನ್ ಹಗರಣ, ಹ್ಯಾರಿಸ್ ಪುತ್ರನ ಜತೆ ಶ್ರೀಕಿ ಹಳೆಯ ಗೆಳೆತನ!
* ನರೇಂದ್ರ ಮೋದಿ-ಬೊಮ್ಮಾಯಿ ಭೇಟಿ.. ಏನಾಯ್ತು ಚರ್ಚೆ?
ಅಮೆರಿಕದಲ್ಲಿ ಮೋದಿಗೆ ಗೊತ್ತಾಯ್ತಾ ಬಿಟ್ ಕಾಯಿನ್ ಹಗರಣ?
ಬೆಂಗಳೂರು(ನ. 12) ಬಿಟ್ ಕಾಯಿನ್( Bitcoin Scam) ಹಗರಣ ದ ಚರ್ಚೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತನಿಖೆ ಶುರುವಾಗಿದೆ ಎಂದು ಸರ್ಕಾರ (Karnataka Govt) ಹೇಳಿದ್ದರೂ ಅಧಿಕೃತವಾಗಿಲ್ಲ. ಹ್ಯಾಕರ್ ಶ್ರೀಕಿ ವಿದೇಶದಲ್ಲಿ ಓದಿ ಬಂದ ನಂತರ ಶಾಂತಿನಗರದ ಶಾಸಕ ಹ್ಯಾರೀಸ್ ಪುತ್ರನ ಜತೆ ಗೆಳೆತನ ಇತ್ತು ಎಂಬ ಅಂಶವೂ ಬಹಿರಂಗವಾಗಿದೆ.
ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ' ಶ್ರೀಕಿಯ ಇತಿಹಾಸ
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣ ಸೇರಿ ಬಿಟ್ ಕಾಯಿನ್ ವಿಚಾರಗಳ ಬಗ್ಗೆ ಬೊಮ್ಮಾಯಿ ಅವರೇ ಕೇಂದ್ರ ನಾಯಕರಿಗೆ ಮಾಹಿತಿ ಕೊಟ್ಟಿದ್ದಾರೆ. ನರೇಂದ್ರ ಮೋದಿ (Narendra Modi) ಅಮೆರಿಕ ಪ್ರವಾಸಕ್ಕೆ ಹೋದಾಗ ಮೋದಿ ಅವರಿಗೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಗೊತ್ತಾಯಿತಂತೆ. ಅಲ್ಲಿಂದ ವಾಪಸ್ ಬಂದ ಪ್ರಧಾನಿಗೆ ಹಗರಣದ ಎಲ್ಲ ವಿವರ ಗೊತ್ತಾಯಿತಂತೆ..ಇದೆಲ್ಲ ವದಂತಿಗಳು .. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...