Asianet Suvarna News Asianet Suvarna News

ಬೆಂಗಳೂರು : ಕುಸಿಯುವ ಭೀತಿಯಲ್ಲಿ ಪೊಲೀಸ್ ಕ್ವಾರ್ಟರ್ಸ್, 32 ಕುಟುಂಬಗಳು ಇಲ್ಲಿ ವಾಸ

Oct 16, 2021, 1:00 PM IST

ಬೆಂಗಳೂರು (ಅ. 16): ರಾಜಧಾನಿಯಲ್ಲಿ ಮತ್ತೊಂದು ಬೃಹತ್ ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಬಿನ್ನಿ ಮಿಲ್ ಬಳಿಯ ಪೊಲೀಸ್ ಕ್ವಾರ್ಟರ್ಸ್‌ ಕುಸಿಯುವ ಭೀತಿಯಲ್ಲಿದೆ. 7 ಅಂತಸ್ತಿನ ಕಟ್ಟಡ ಇದಾಗಿದ್ದು 32 ಕುಟುಂಬಗಳು ವಾಸವಾಗಿದೆ.

ಐಸಿಯು ಬೆಡ್ ಇಲ್ಲ, ಸ್ಟ್ರೆಚರ್ ಇಲ್ಲ, ರೋಗಿಗಳನ್ನು ಕೇಳೋರಿಲ್ಲ: ವಿಕ್ಟೋರಿಯಾ ಕರ್ಮಕಾಂಡ

ಎಲ್ಲಾ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಸಿದ್ಧತೆ ಮಾಡಲಾಗಿದೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ  ಕಟ್ಟಡ ಕುಸಿತ ಪ್ರಕರಣಗಳನ್ನು ಗಮನಿಸಬಹುದಾಗಿದೆ. ಇದೀಗ ಪೊಲೀಸ್‌ ಕ್ವಾರ್ಟರ್ಸ್‌ಗೂ ಭೀತಿ ಎದುರಾಗಿದ್ದು, ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.