ಗೋಕರ್ಣ ಕೋಟಿತೀರ್ಥ ಪುಷ್ಕರಣಿಗೆ ಕೊನೆಗೂ ಸಿಕ್ತು ಸ್ವಚ್ಛತಾ ಭಾಗ್ಯ; ಇದು ಬಿಗ್ 3 ಇಂಪ್ಯಾಕ್ಟ್!
ಗೋಕರ್ಣದ ಕೋಟಿತೀರ್ಥ ಕಸ ಕಟ್ಟಿಗಳಿಂದ, ಪಾಚಿ, ಗಲೀಜುಗಳಿಂದ ತುಂಬಿ ಗಬ್ಬು ನಾರುತ್ತಿತ್ತು. ಗೋಕರ್ಣಕ್ಕೆ ಬರುವ ಭಕ್ತಾದಿಗಳು ಈ ಪುಷ್ಕರಣಿಯಲ್ಲಿ ಸ್ನಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು.
ಬೆಂಗಳೂರು (ನ. 26): ಗೋಕರ್ಣದ ಕೋಟಿತೀರ್ಥ ಕಸ ಕಟ್ಟಿಗಳಿಂದ, ಪಾಚಿ, ಗಲೀಜುಗಳಿಂದ ತುಂಬಿ ಗಬ್ಬು ನಾರುತ್ತಿತ್ತು. ಗೋಕರ್ಣಕ್ಕೆ ಬರುವ ಭಕ್ತಾದಿಗಳು ಈ ಪುಷ್ಕರಣಿಯಲ್ಲಿ ಸ್ನಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಪವಿತ್ರ ಸ್ಥಳದಲ್ಲಿ ಈ ರೀತಿ ಪುಷ್ಕರಣಿ ಅವ್ಯವಸ್ಥೆಯಾಗಿದ್ದರೂ ಸರ್ಕಾರ, ಆಡಳಿತ ವರ್ಗ ಕಣ್ಮುಚ್ಚಿ ಕುಳಿತಿರುವುದರ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ಸ್ಪಂದನೆ ಸಿಕ್ಕಿದೆ.
ಇದು ಪುಷ್ಕರಣಿಯೋ, ಕಸ ಕಡ್ಡಿಗಳ ಗುಡ್ಡೆಯೋ? ಗೋಕರ್ಣದ ಮಹಾಬಲೇಶ್ವರ ಪುಷ್ಕರಣಿಯ ದುರಾವಸ್ಥೆ ಇದು!
ಸ್ಥಳೀಯರು ಬೋಟ್ ಮೂಲಕ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಸಚಿವ ಈಶ್ವರಪ್ಪನವರು ಕೂಡಾ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಅದಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಸಿಗುತ್ತದೆ.