ಟೀಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿಗೆ BIG 3 ನೆರವು, ಮಗನಿಗೆ ಬೇರೆ ಶಾಲೆಯಲ್ಲಿ ಅಡ್ಮಿಶನ್..!

ಶಾಲಾ ಟೀಸಿ ಕೊಡುವ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಶಾಲಾ ಆಡಳಿತ ಮಂಡಳಿ ಸತಾಯಿಸುತ್ತಾ ಬಂದಿದ್ದು, ಬೇಸತ್ತ ವಿದ್ಯಾರ್ಥಿ ತಾಯಿ (Mother )ತನ್ನ ಮಾಂಗಲ್ಯ ಸರ (Mangalsutra ) ಮಾರಿ, ವಿದ್ಯಾರ್ಥಿಯ ಫೀ ಕಟ್ಟಲು ಸಿದ್ದವಾಗಿದ್ದಳು.‌ ಇಂತ ಮನಕಲಕುವ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ಕೊಪ್ಪಳ (ಜೂ. 06): ಶಾಲಾ ಟೀಸಿ ಕೊಡುವ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಶಾಲಾ ಆಡಳಿತ ಮಂಡಳಿ ಸತಾಯಿಸುತ್ತಾ ಬಂದಿದ್ದು, ಬೇಸತ್ತ ವಿದ್ಯಾರ್ಥಿ ತಾಯಿ (Mother )ತನ್ನ ಮಾಂಗಲ್ಯ ಸರ (Mangalsutra ) ಮಾರಿ, ವಿದ್ಯಾರ್ಥಿಯ ಫೀ ಕಟ್ಟಲು ಸಿದ್ದವಾಗಿದ್ದಳು.‌ ಇಂತ ಮನಕಲಕುವ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ. 

ಎಂಟು ವರ್ಷದಲ್ಲಿ ಮೋದಿ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೆ ಸೃಷ್ಟಿಸಿದ್ದು ಯಾವ ಅಸ್ತ್ರ.?

ಕೊಪ್ಪಳ (Koppala) ಜಿಲ್ಲೆಯ ಕನಕಗಿರಿ ಪಟ್ಟಣದ ಮಾರುತಿರಾವ್ ಹಾಗೂ ರುಕ್ಮೀಣಿ ಎನ್ನುವರ ಮಗ ದರ್ಶನ್ ಗಂಗಾವತಿ ತಾಲೂಕಿನ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2019 ರಲ್ಲಿ 5 ನೇ ತರಗತಿಗೆ ಅಡ್ಮಿಶನ್ ಮಾಡಿಸಿದ್ದಾರೆ. ಆ ವೇಳೆಯಲ್ಲಿ ದರ್ಶನ್ ತಾಯಿ ರುಕ್ಮಿಣಿ 20 ಸಾವಿರ ಫೀಸ್ ತುಂಬಿದ್ದಾರೆ. ಬಳಿಕ ಶಾಲೆಯ ಫೀ ಕಟ್ಟಲು ಸಾಧ್ಯವಾಗದ ಹಿನ್ನಲೆಯಲ್ಲಿ 2020-21ನೇ ಸಾಲಿನಲ್ಲಿ ದರ್ಶನ್ ತಾಯಿ ರುಕ್ಮಿಣಿ ಮಗನ ಟಿಸಿ ನೀಡಲು ಶಾಲೆಯವರನ್ನು ಕೇಳಿದ್ದಾರೆ. ಆಗ ಶಾಲೆಯವರು ಒಂದು ವರ್ಷದ 20 ಸಾವಿರ ಫೀ ಕಟ್ಟಿ, ಟಿಸಿ ತೆಗೆದುಕೊಂಡು ಹೋಗಲು ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಸೀದಿ ವಿರುದ್ಧ ಕೇಸರಿ ಕಿಚ್ಚು: ಹಿಂದೂ ಸಂಘಟನೆಗಳ 10 ಪ್ರಶ್ನೆಗಳೇನು?

ಆಗ ರುಕ್ಮಿಣಿ ನನ್ನ ಬಳಿ ಅಷ್ಟೊಂದು ಹಣ ಇಲ್ಲವೆಂದು ಹೇಳಿದ್ದಾಳೆ. ಜೊತೆಗೆ ಕೊವೀಡ್ ಸಹ ಹೆಚ್ಚಳವಾದ ಹಿನ್ನಲೆಯಲ್ಲಿ ಶಾಲೆಗೆ ಹೋಗಲೇ ಇಲ್ಲ.‌ಬಳಿಕ 2021-22 ನೇ ಸಾಲಿನಲ್ಲಿಯೂ ಟಿಸಿ ಕೇಳಲು ಹೋದಾಗ ಶಾಲೆಯವರು 2 ವರ್ಷದ 40 ಸಾವಿರ ಫೀ ಕಟ್ಟಲು ಹೇಳಿದ್ದಾರೆ. ಇದರಿಂದ ಕಂಗಾಲಾದ ದರ್ಶನ್ ತಾಯಿ ಸೀದಾ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮ ನಡೆಸಿಕೊಡುವ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ತನ್ನ ಸಮಸ್ಯೆ ಹೇಳಿಕೊಂಡೊದ್ದಾಳೆ. ಇದನ್ನ ಬಿಗ್ 3 ಪ್ರಸಾರ ಮಾಡಿ, ಆ ತಾಯಿಗೆ ನ್ಯಾಯ ಒದಗಿಸಿದೆ. ಬಿಗ್ 3 ವರದಿ ಬಳಿಕ ಶಾಲೆಯಿಂದ ಟಿಸಿ ಕೊಡಲಾಯಿತು, ಬೇರೆ ಶಾಲೆಗೆ ಅಡ್ಮಿಶನ್ ಕೂಡಾ ಆಗಿದೆ. 


Related Video