Asianet Suvarna News Asianet Suvarna News

ಶ್ರೀರಂಗಪಟ್ಟಣದಲ್ಲಿ ಮಸೀದಿ ವಿರುದ್ಧ ಕೇಸರಿ ಕಿಚ್ಚು: ಹಿಂದೂ ಸಂಘಟನೆಗಳ 10 ಪ್ರಶ್ನೆಗಳೇನು?

ಅಂದು ಮಳಲಿ ದರ್ಗಾ ದಿಂದ ಶುರುವಾದ ಈ ಹೋರಾಟ, ಬಸವಣ್ಣರ ನಾಡಿಗೂ ಕಾಲಿಟ್ಟು, ಈಗ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿವರೆಗೂ ಬಂದು ನಿಂತಿದೆ. ಈ ಕುರಿತ ಕಂಪ್ಲೀಟ್‌ ರಿಫೋರ್ಟ್‌ ಇಲ್ಲಿದೆ

ಮಂಡ್ಯ (ಜೂ. 05): ಶ್ರೀರಂಗಪಟ್ಟಣದಲ್ಲಿ ಒಂದೇ ಕೂಗು ಕೇಳಿಸುತ್ತಿತ್ತು. ಆ ಕೂಗು ಇಡಿ ರಾಜ್ಯಕ್ಕೆ ಕೇಳಿಸ್ತಿತ್ತು. ಅದೇ ಜೈಶ್ರೀರಾಮ್​​. ರಾಜ್ಯದಲ್ಲಿ ಹಿಜಾಬ್​​- ಕೇಸರಿ ಕಿಚ್ಚು, ಹಲಾಲ್​​-ಜಟ್ಕಾ ಕಟ್​​​​, ಮುಸ್ಲಿಂ ವ್ಯಾಪಾರ ನಿರ್ಬಂಧ,ಆಜಾನ್​​​-ಭಜನೆ, ಮಾವು ಧರ್ಮಯುದ್ಧ, ಮುಸ್ಲಿಂ ಟ್ರ್ಯಾವೆಲ್ಸ್​​​​​ ಬ್ಯಾನ್ ಹೀಗೆ ಮುಸ್ಲಿಮರ ವಿರುದ್ಧ ಹಿಂದೂ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದವು. ಅಂದಿನ ಬೆಂಕಿ ನಂದಿದ್ರೂ, ಕಿಡಿ ಮಾತ್ರ ಆರಿಲ್ಲ. ಈ ಕಿಡಿ ಮತ್ತೆ ಜ್ವಾಲೆಯಾಗಿ ಸ್ಫೋಟಗೊಂಡಿದೆ. ರಾಜ್ಯದಲ್ಲೂ ಜ್ಞಾನವಾಪಿ ಮಾದರಿಯಲ್ಲೇ ಇರೋ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಈ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಹೌದು, ಉತ್ತರ ಪ್ರದೇಶದಲ್ಲಿ ಶುರುವಾಗಿರೋ ಮಸೀದಿ, ಮಂದಿರ ಸಂಘರ್ಷ ಈಗ ಕರುನಾಡಿಗೂ ಕಾಲಿಟ್ಟಿದೆ. ಅಂದು ಮಳಲಿ ದರ್ಗಾ ದಿಂದ ಶುರುವಾದ ಈ ಹೋರಾಟ, ಬಸವಣ್ಣರ ನಾಡಿಗೂ ಕಾಲಿಟ್ಟು, ಈಗ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿವರೆಗೂ ಬಂದು ನಿಂತಿದೆ. ಈ ಕುರಿತ ಕಂಪ್ಲೀಟ್‌ ರಿಫೋರ್ಟ್‌ ಇಲ್ಲಿದೆ

ಇದನ್ನೂ ನೋಡಿ: ಜಾಮಿಯಾ ಮಸೀದಿ ವಿವಾದ: ಮಸೀದಿಯೊಳಗೆ ಗಣಪತಿ,ಲಕ್ಷ್ಮೀ ಹೋಲಿಕೆಯ ಕೆತ್ತನೆ ಪತ್ತೆ

Video Top Stories