Hebbal Flyover: ಪಾದಚಾರಿಗಳ ಅನುಕೂಲಕ್ಕೆ ಇಬ್ಬರು ಕಾನ್ಸ್‌ಟೇಬಲ್ಸ್, 4 ಟ್ರಾಫಿಕ್ ಪೊಲೀಸರ ನಿಯೋಜನೆ
ಹೆಬ್ಬಾಳ ಮೇಲ್ಸೇತುವೆ ಬಳಿಯ ಅಂಡರ್ ಪಾಸ್ ಬಳಿ ರಸ್ತೆ ದಾಟುವಾಗ ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಅಂಡರ್ ಪಾಸ್ ಬಳಿ ವಾಹನ ಹಾಗೂ ಪಾದಚಾರಿಗಳ ಸಂಚಾರ ನಿರ್ವಹಿಸಲು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬೆಂಗಳೂರು (ಮಾ. 23): ಹೆಬ್ಬಾಳ ಮೇಲ್ಸೇತುವೆ ಬಳಿಯ ಅಂಡರ್ ಪಾಸ್ ಬಳಿ ರಸ್ತೆ ದಾಟುವಾಗ ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಅಂಡರ್ ಪಾಸ್ ಬಳಿ ವಾಹನ ಹಾಗೂ ಪಾದಚಾರಿಗಳ ಸಂಚಾರ ನಿರ್ವಹಿಸಲು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ACB Raid: ಬಿಡಿಎ ಅಧಿಕಾರಿಗಳಿಗೆ ನಡುಕ, ಭ್ರಷ್ಟಾಚಾರ ಎಂದು ಸಾಬೀತಾದ್ರೆ ಸಂಕಷ್ಟ ಫಿಕ್ಸ್..!
ಇಬ್ಬರು ನಾಗರಿಕ ಪೊಲೀಸ್ ಹಾಗೂ ನಾಲ್ವರು ಸಂಚಾರ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಅಂಡರ್ ಪಾಸ್ ಬಳಿ ಮಂಗಳವಾರ ಕರ್ತವ್ಯ ನಿಯೋಜಿಸಲಾಗಿತ್ತು. ಅಂಡರ್ ಪಾಸ್‌ನಲ್ಲಿ ತುಂಬಿದ್ದ ಮಳೆ ನೀರನ್ನು ಹೊರಹಾಕಿದ ಪರಿಣಾಮ ಸಾರ್ವಜನಿಕರ ಸಂಚಾರ ಎಂದಿನಂತೆ ಮುಂದುವರಿದಿತ್ತು. ಈ ಅಂಡರ್‌ಪಾಸ್ ಮೂಲಕ ಮೇಲೆ ಬಂದರೂ ಸರ್ವಿಸ್ ರಸ್ತೆ ದಾಟಿಯೇ ಸಾರ್ವಜನಿಕರು ಸಂಚರಿಸಬೇಕಾದ ಸ್ಥಿತಿಯಿದೆ. ಹೀಗಾಗಿ ವಾಹನ ಸಂಚಾರ ಹೆಚ್ಚಿರುವ ರಸ್ತೆಯನ್ನು ಪಾದಚಾರಿಗಳು ಏಕಾಏಕಿ ದಾಟದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.