ACB Raid: ಬಿಡಿಎ ಅಧಿಕಾರಿಗಳಿಗೆ ನಡುಕ, ಭ್ರಷ್ಟಾಚಾರ ಎಂದು ಸಾಬೀತಾದ್ರೆ ಸಂಕಷ್ಟ ಫಿಕ್ಸ್.!

ಬಿಡಿಎಯಲ್ಲಿ ತಳವೂರಿದೆ ಎನ್ನಲಾಗಿರುವ ‘ಅಕ್ರಮ ಕೂಟ’ದ ವಿರುದ್ಧ ಮೊದಲ ಬಾರಿಗೆ ಗದಾಪ್ರಹಾರ ನಡೆಸಿರುವ ಎಸಿಬಿ, ಬಿಡಿಎಯಲ್ಲಿನ ‘ನವ’ ಕೋಟ್ಯಧಿಪತಿ ಬ್ರೋಕರ್‌ಗಳ ಮೇಲೆ ಕಾರ್ಯಾಚರಣೆ ನಡೆಸಿ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದೆ. 

First Published Mar 23, 2022, 9:57 AM IST | Last Updated Mar 23, 2022, 12:09 PM IST

ಬೆಂಗಳೂರು (ಮಾ. 23): ಬಿಡಿಎಯಲ್ಲಿ ತಳವೂರಿದೆ ಎನ್ನಲಾಗಿರುವ ‘ಅಕ್ರಮ ಕೂಟ’ದ ವಿರುದ್ಧ ಮೊದಲ ಬಾರಿಗೆ ಗದಾಪ್ರಹಾರ ನಡೆಸಿರುವ ಎಸಿಬಿ, ಬಿಡಿಎಯಲ್ಲಿನ ‘ನವ’ ಕೋಟ್ಯಧಿಪತಿ ಬ್ರೋಕರ್‌ಗಳ ಮೇಲೆ ಕಾರ್ಯಾಚರಣೆ ನಡೆಸಿ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದೆ. 

Suvarna News Impact: ಅಕ್ರಮ ಮನೆಗಳು ನೆಲಸಮ, 1.42 ಎಕರೆ ಜಾಗ ಮತ್ತೆ ಸರ್ಕಾರದ ಸ್ವಾಧೀನಕ್ಕೆ

9 ಬ್ರೋಕರ್‌ಗಳು ಎಸಿಬಿ ಗಾಳಕ್ಕೆ ಸಿಲುಕಿದ ಬೆನ್ನಲ್ಲೇ ಬಹು ಕೋಟಿ ರು. ಮೌಲ್ಯದ ಭೂ ಹಗರಣದಲ್ಲಿ ಹೆಸರು ಪ್ರಸ್ತಾಪವಾಗಿರುವ ಬಿಡಿಎನ ಹಾಲಿ ಹಾಗೂ ಮಾಜಿ ಐಎಎಸ್‌ ಮತ್ತು ಕೆಎಎಸ್‌ ಸೇರಿ ಕೆಲವು ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಈ ದಲ್ಲಾಳಿಗಳ ಹೇಳಿಕೆ ಆಧರಿಸಿ ಅಧಿಕಾರಿಗಳಿಗೆ ಎಸಿಬಿ ತನಿಖೆಯ ಉರುಳು ಸುತ್ತಿಕೊಳ್ಳುವ ಆತಂಕವಿದೆ.

ನಾವು ಬಿಡಿಎ ಅವ್ಯವಹಾರಕ್ಕೆ ಸಂಬಂಧಪಟ್ಟದಾಖಲೆಗಳನ್ನು ಮಾತ್ರ ಬಿಡಿಎ ದಲ್ಲಾಳಿಗಳ ಮನೆಯಲ್ಲಿ ಜಪ್ತಿ ಮಾಡಿದ್ದೇವೆ. ನಮ್ಮ ಕಾರ್ಯಾಚರಣೆ ವೇಳೆ ಸಿಕ್ಕಿದ ಚಿನ್ನ, ಬೆಳ್ಳಿ ಹಾಗೂ ಹಣದ ಕುರಿತು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ಮುಂದಿನ ಕಾನೂನು ಕ್ರಮವನ್ನು ಆ ಇಲಾಖೆಗಳು ಜರುಗಿಸಲಿವೆ ಎಂದು ಎಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

Video Top Stories