ಇಂದು, ನಾಳೆ ಬೈಯಪ್ಪನಹಳ್ಳಿ-ಎಂಜಿ ರಸ್ತೆವರೆಗೆ ಮೆಟ್ರೋ ರೈಲು ಸ್ಥಗಿತ

ನಮ್ಮ ಮೆಟ್ರೋ ರೈಲು ನಿಗಮವು ಇಂದು ನೇರಳೆ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಸಲಿರುವ ಹಿನ್ನೆಲೆಯಲ್ಲಿ ಭಾನುವಾರದವರೆಗೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸಂಚಾರ ಸೇವೆ ಸ್ಥಗಿತಗೊಳ್ಳಲಿದೆ.
 

First Published Oct 9, 2021, 10:37 AM IST | Last Updated Oct 9, 2021, 10:51 AM IST

ಬೆಂಗಳೂರು (ಅ. 09): ನಮ್ಮ ಮೆಟ್ರೋ ರೈಲು ನಿಗಮವು ಇಂದು ನೇರಳೆ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಸಲಿರುವ ಹಿನ್ನೆಲೆಯಲ್ಲಿ ಭಾನುವಾರದವರೆಗೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸಂಚಾರ ಸೇವೆ ಸ್ಥಗಿತಗೊಳ್ಳಲಿದೆ.

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ರಾಜೀನಾಮೆ

ನೇರಳೆ ಮಾರ್ಗದಲ್ಲಿ ಬರುವ ಟ್ರಿನಿಟಿ ಹಾಗೂ ಹಲಸೂರು ಮೆಟ್ರೋ ನಿಲ್ದಾಣಗಳ ಮಧ್ಯೆ ಶನಿವಾರ ಮಧ್ಯಾಹ್ನ 4 ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಮೆಟ್ರೋ ನಿಗಮದಿಂದ ದುರಸ್ತಿ ಕಾರ್ಯ ನಡೆಯಲಿದೆ. ಈ ಅವಧಿಯಲ್ಲಿ ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ದುರಸ್ತಿ ಕಾಮಗಾರಿ ನಂತರ ನೇರಳೆ ಮಾರ್ಗದ ಮೆಟ್ರೋ ಸೇವೆ ಭಾನುವಾರದಿಂದ ಪುನಃ ಆರಂಭವಾಗಲಿದೆ.