ಬೆಂಗಳೂರು: ಆ್ಯಸಿಡ್‌ ಸಂತ್ರಸ್ತೆಗೆ 1 ಲಕ್ಷ ರೂ ನೆರವು, ಸಚಿವ ಹಾಲಪ್ಪ ಆಚಾರ್ ಘೋಷಣೆ

 ಪಾಗಲ್ ಪ್ರೇಮಿಯಿಂದ Acid ದಾಳಿಗೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸಂತ್ರಸ್ತ ಯುವತಿಗೆ ವೈಯಕ್ತಿಕವಾಗಿ 1 ಲಕ್ಷ ರೂ ನೆರವು, ಆಸ್ಪತ್ರೆಯ ಖರ್ಚುವೆಚ್ಚ ನೋಡಿಕೊಳ್ಳುವುದಾಗಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ (Halappa Achar) ಹೇಳಿದ್ದಾರೆ.

First Published Apr 30, 2022, 1:54 PM IST | Last Updated Apr 30, 2022, 2:35 PM IST

ಬೆಂಗಳೂರು (ಏ. 30): ಪಾಗಲ್ ಪ್ರೇಮಿಯಿಂದ Acid ದಾಳಿಗೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸಂತ್ರಸ್ತ ಯುವತಿಗೆ ವೈಯಕ್ತಿಕವಾಗಿ 1 ಲಕ್ಷ ರೂ ನೆರವು, ಆಸ್ಪತ್ರೆಯ ಖರ್ಚುವೆಚ್ಚ ನೋಡಿಕೊಳ್ಳುವುದಾಗಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ (Halappa Achar) ಹೇಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ, ಅವರು ಭೇಟಿ ನೀಡುತ್ತಾರೆ, ಅಗತ್ಯ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ, ತಪ್ಪಿತಸ್ಥನಿಗೆ ಏನು ಶಿಕ್ಷೆಯಾಗಬೇಕೋ ಅದು ಆಗುತ್ತದೆ ಎಂದು ಹಾಲಪ್ಪ ಆಚಾರ್ ಹೇಳಿದ್ದಾರೆ. 

Acid Attack: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆ್ಯಸಿಡ್‌ ಸಂತ್ರಸ್ತೆ ಕುಟುಂಬ