News Hour: ಇಸ್ಲಾಂಗೆ ಮತಾಂತರವಾಗಿ, ಇಲ್ಲವೇ ನಮ್ಮ ಗುಲಾಮರಾಗಿ, ಬೆಂಗಳೂರಿನ ಶಾಲೆಗಳಿಗೆ ಬಂತು ಬಾಂಬ್‌ ಬೆದರಿಕೆ!


ಬೆಳ್ಳಬೆಳಗ್ಗೆ ಬೆಂಗಳೂರಿನ 48 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಏಕಕಾಲದಲ್ಲಿ ರವಾನೆಯಾಗಿದ್ದರಿಂದ, ರಾಜ್ಯದಲ್ಲಿ ಇಂದು ಕೊಂಚ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
 

First Published Dec 1, 2023, 11:11 PM IST | Last Updated Dec 1, 2023, 11:11 PM IST

ಬೆಂಗಳೂರು (ಡಿ.1): ಬೆಂಗಳೂರಿನ ಶಾಲೆಗಳಲ್ಲಿ ಬೆಳ್ಳಂಬೆಳಗ್ಗೆ ಬಾಂಬ್‌ ಬೆದರಿಕೆ ಬಂದಿದೆ. 48 ಶಾಲೆಗಳಿಗೆ ಏಕಕಾಲದಲ್ಲಿ ಬಾಂಬ್‌ ಬೆದರಿಕೆ ಕರೆ ಬಂದಿವೆ. ಇಮೇಲ್‌ ಬೆದರಿಕೆಗೆ ಬೆಂಗಳೂರಿನ ಶಾಲೆಗಳು ಬೆಚ್ಚಿಬಿದ್ದಿವೆ. ಮಧ್ಯಾಹ್ನದ ವೇಳೆ ಪೊಲೀಸರು ಇದು ಹುಸಿ ಬಾಂಬ್‌ ಬೆದರಿಕೆ ಎಂದು ಹೇಳಿದ್ದಾರೆ.

ಬೆದರಿಕೆ ಇಮೇಲ್‌ನಲ್ಲಿ ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ನಮ್ಮ ಗುಲಾಮರಾಗಿ, ನಿಮ್ಮನ್ನು, ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಉಳಿಸೋದಿಲ್ಲ ಎಂದು ಬೆದರಿಸಲಾಗಿದೆ. ಇದನ್ನು ಓದಿ ಶಾಲಾ ಮುಖ್ಯಸ್ಥರೇ ಆತಂಕಪಟ್ಟಿದ್ದಾರೆ. ಇದು ಕಿಡಿಗೇಡಿ ಕೃತ್ತವೇ? ಇಸ್ಲಾಮಿಕ್‌ ಉಗ್ರ ಸಂಘಟನೆಯ ಎಚ್ಚರಿಕೆಯೇ ಎನ್ನುವ ಬಗ್ಗೆ ತನಿಖೆ ಆರಂಭವಾಗಿದೆ.

'ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಿರಿ..' ಬೆಂಗಳೂರಿನ ಶಾಲೆಗಳಿಗೆ ಬಂದ ಈಮೇಲ್‌ನಲ್ಲಿತ್ತು ಜಿಹಾದಿ ಬೆದರಿಕೆ

ಡಿಸಿಎಂ ಡಿಕೆ ಶಿವಕುಮಾರ್‌ ಅವರ ಮನೆಯ ಎದುರಿನ ಶಾಲೆಗೂ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಬೆಳಗಿನ ವ್ಯಾಯಾಮ ಮಾಡುತ್ತಿದ್ದವರು ಸುದ್ದಿ ತಿಳಿದ ತಕ್ಷಣವೇ ಶಾಲೆಗೆ ಭೇಟಿ ನೀಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಈ ಘಟನೆಯ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.