Belagavi Riot: ಕೆಲವರ ಪುಂಡಾಟದಿಂದ ಅಮಾಯಕರಿಗೆ ತೊಂದರೆ, ಸರ್ಕಾರ ಕ್ರಮ ಕೈಗೊಳ್ಳಲಿ: ಡಾಲಿ

ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

First Published Dec 19, 2021, 5:37 PM IST | Last Updated Dec 19, 2021, 5:37 PM IST

ಬೆಂಗಳೂರು (ಡಿ. 19): ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಪಿಎಸ್ ವಿಕೃತಿಯನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಾಳೆ ಬಂದ್‌ಗೆ ಕರೆ ನೀಡಿವೆ. 

Belagavi Riot: ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಶಿವಸೇನೆ ಪುಂಡಾಟ

ಈ ಗಲಾಟೆ ಬಗ್ಗೆ ನಟ ಡಾಲಿ ಧನಂಜಯ್ (Dali Dhananjay) ಪ್ರತಿಕ್ರಿಯಿಸಿದ್ದಾರೆ. ' ಎಲ್ಲಾ ರಾಜ್ಯದವರು ಎಲ್ಲಾ ಕಡೆ ಇದ್ದೇವೆ. ಈ ರೀತಿ ಗಲಾಟೆ ಮಾಡುವುದು ಸರಿಯಲ್ಲ. ಒಂದಿಷ್ಟು ಜನರ ಪುಂಡಾಟಿಕೆಯಿಂದ ಅಮಾಯಕರ ಜೀವಕ್ಕೆ ತೊಂದರೆಯಾಗುತ್ತಿದೆ. ಇವೆಲ್ಲಾ ನಿಲ್ಲಬೇಕು. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಪರ ನಡೆಯುವ ಹೋರಾಟಗಳಲ್ಲಿ ಇದ್ದೇ ಇರುವೆ' ಎಂದಿದ್ಧಾರೆ.