ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು: ಹೊಸ ವರ್ಷಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ರೆಡಿ !
ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿರೋ ಪಾಲಿಕೆ
ಈಗಾಗಲೇ ಗೈಡ್‌ಲೈನ್ಸ್ ರೆಡಿಯಾಗ್ತಿದೆ ಎಂದ ಬಿಬಿಎಂಪಿ ಕಮಿಷನರ್
ಪೊಲೀಸ್ ಇಲಾಖೆಗೆ ಸಾಥ್ ನೀಡೋದಾಗಿ ಪಾಲಿಕೆ ಆಯುಕ್ತರ ಹೇಳಿಕೆ
ಹೊಸ ವರ್ಷಕ್ಕೆ ಬಿಬಿಎಂಪಿ(BBMP) ಮತ್ತು ಪೊಲೀಸ್ ಇಲಾಖೆ(Police) ಗೈಡ್‌ಲೈನ್ಸ್ ಬಿಡುಗಡೆ ಮಾಡಲು ರೆಡಿಯಾಗಿದೆ. ಪಾಲಿಕೆ ಜೊತೆ ಸಭೆ ನಡೆಸಿ ಗೈಡ್ ಲೈನ್‌ನನ್ನು(Guidelines) ಪೊಲೀಸರು ರೆಡಿಮಾಡ್ತಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್(New year) ಗುಂಗಿನಲ್ಲಿದ್ದವರಿಗೆ ಲಗಾಮು ಹಾಕಿದ್ದಂತಾಗುತ್ತದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಗೆ ರೂಲ್ಸ್ ಅಪ್ಲೈ ಆಗಲಿದೆ. ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಕೆಗೆ ಪಾಲಿಕೆಗೆ ಸೂಚನೆ ನೀಡಿದೆ. ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಪಾಲಿಕೆ ಕೆಲಸ ಮಾಡುತ್ತಿದೆ. ಈಗಾಗಲೇ ಗೈಡ್‌ಲೈನ್ಸ್ ರೆಡಿಯಾಗುತ್ತಿದ್ದು, ಪೊಲೀಸ್ ಇಲಾಖೆಗೆ ಸಾಥ್ ನೀಡೋದಾಗಿ ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ.ಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯವಾಗಿದ್ದು, ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿದೆ. ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರ, ರಾತ್ರಿ 1 ಗಂಟೆ ತನಕ ನಮ್ಮ ಮೆಟ್ರೋ ಸಂಚಾರ ಮಾಡಲಿದೆ.
ಇದನ್ನೂ ವೀಕ್ಷಿಸಿ: ಪ್ರಧಾನಿ ಭೇಟಿಗೆ ಸಿದ್ದರಾಮಯ್ಯಗೆ ಅವಕಾಶ: ರಾಜ್ಯದ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುತ್ತಾ ?