ಪ್ರಧಾನಿ ಭೇಟಿಗೆ ಸಿದ್ದರಾಮಯ್ಯಗೆ ಅವಕಾಶ: ರಾಜ್ಯದ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುತ್ತಾ ?

ಇನ್ನೂ ಘೋಷಣೆಯಾಗದ ನಿಗಮ ಮಂಡಳಿ ಅಧ್ಯಕ್ಷರ ನೇಮಕ
ಲಿಸ್ಟ್ ಹೈಕಮಾಂಡ್‌ಗೆ ಕಳಿಸಿದ್ರೂ ಇನ್ನೂ ಅಂತಿಮವಾಗದ ಪಟ್ಟಿ
ಶಾಸಕರ ಬೇಸರದಿಂದ ಲೋಕಸಭಾ ಚುನಾವಣೆಗೆ ಎಫೆಕ್ಟ್ ಆತಂಕ

First Published Dec 18, 2023, 12:21 PM IST | Last Updated Dec 18, 2023, 12:21 PM IST

ಇಂದಿನಿಂದ ಮೂರು ದಿನ ಸಿಎಂ, ಡಿಸಿಎಂ ದೆಹಲಿ ಪ್ರವಾಸ ಮಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಹೋಗಲಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್(DK shivakumar) ಅಲ್ಲಿ ಕಾಂಗ್ರೆಸ್ ಹೈಕಮಾಂಡ್(Congress Highcommand) ನಾಯಕರ ಭೇಟಿ ಮಾಡಲಿದ್ದಾರೆ. ಜೊತೆಗೆ ಕೇಂದ್ರ ಸಚಿವರನ್ನೂ ಸಹ ಭೇಟಿಯಾಗಲಿದ್ದಾರೆ. ಪಿಎಂ ಸೇರಿ ಕೇಂದ್ರ ಸಚಿವರ ಭೇಟಿಗೆ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ(Siddaramaiah) ಭೇಟಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವಕಾಶ ನೀಡಿದ್ದಾರೆ. ಡಿಸೆಂಬರ್ 19ರಂದು ಬೆಳಗ್ಗೆ 11 ಗಂಟೆಗೆ ಭೇಟಿಗೆ ಸಮಯಾವಕಾಶ ನಿಗದಿಯಾಗಿದೆ. ಮೂರು ದಿನಗಳ ದೆಹಲಿ ಪ್ರವಾಸದ ವೇಳೆ ನಾಯಕರು ಮೋದಿ ಭೇಟಿಯಾಗಲಿದ್ದಾರೆ. ನಮಗೆ ಸಮಯ ಕೊಡ್ತಿಲ್ಲ ಎಂದಿಲ್ಲ ಆರೋಪವನ್ನು ಸಿಎಂ ಮಾಡಿದ್ದರು. ಭೇಟಿಗೆ ಅವಕಾಶ ಕೊಡಿಸಿ ಎಂದು ಬಿಜೆಪಿ ನಾಯಕರನ್ನು ಕಿಚಾಯಿಸಿದ್ದರು. ಕೊನೆಗೂ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ. ಈ ಭೇಟಿಯಲ್ಲಿ ರಾಜ್ಯದಲ್ಲಿ ಬರಗಾಲ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ರಾಜ್ಯಕ್ಕೆ ಬರಬೇಕಾದ ಎನ್ಡಿಆರ್ಎಫ್ ಹಣ ಬಿಡುಗಡೆಗೆ ಮನವಿ ಮಾಡುವ ಸಾಧ್ಯತೆ ಇದೆ. ರಾಜ್ಯದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಬಹುದು.

ಇದನ್ನೂ ವೀಕ್ಷಿಸಿ:  ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅಖಾಡಕ್ಕೆ ಇಳೀತಾರಾ..? ಪರೋಕ್ಷವಾಗಿ ನಾನೂ ಅಭ್ಯರ್ಥಿ ಎಂದರಾ ಕಾಗೇರಿ..?

Video Top Stories