ಈದ್ಗಾ ಮೈದಾನ ವಿವಾದ: ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಸಲ್ಮಾನ ಸಂಘಟನೆಗಳು ಇದು ನಮಗೆ ಸೇರಿದ ಜಾಗ ಎಂದರೆ, ಹಿಂದೂ ಸಂಘಟನೆಗಳು ಇದು ನನಗೆ ಸೇರಿದ ಜಾಗ ಎಂದು ವಾದ ಮಂಡಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 08): ಚಾಮರಾಜಪೇಟೆ ಈದ್ಗಾ ಮೈದಾನ (Edga Maidana) ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಸಲ್ಮಾನ ಸಂಘಟನೆಗಳು ಇದು ನಮಗೆ ಸೇರಿದ ಜಾಗ ಎಂದರೆ, ಹಿಂದೂ ಸಂಘಟನೆಗಳು ಇದು ನನಗೆ ಸೇರಿದ ಜಾಗ ಎಂದು ವಾದ ಮಂಡಿಸುತ್ತಿದ್ದಾರೆ. 'ಈದ್ಗಾ ಮೈದಾನ ಬಿಬಿಎಂಪಿ ಸುಪರ್ದಿಯಲ್ಲಿದೆ. ಅಲ್ಲಿ ಯಾವದೇ ದರ್ಗಾ ಇಲ್ಲ. ಅಲ್ಲಿ ಆಟದ ಮೈದಾನ ಇರೋದು ನಿಜ. 1974 ಸಿಟಿ ಸರ್ವೆ ದಾಖಲೆಯಂತೆ ಆಟದ ಮೈದಾನ ಅಂತಿದೆ. ಹೋಲ್ಡರ್ ಸಿಟಿ ಕಾರ್ಪೋರೇಷನ್ ಬೆಂಗಳೂರು ಎಂದು ನಮೂದಾಗಿದೆ. ಖಾತೆಯಲ್ಲೂ ಹಾಗೆ ನಮೂದಾಗಿದೆ. ಈಗ ನಡೆಯುತ್ತಿರುವ ವಾದ- ವಿವಾದಗಳಿಗೂ ನಮಗೂ ಸಂಬಂಧವಿಲ್ಲ' ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿದ್ದಾರೆ. 

ಈದ್ಗಾ ಮೈದಾನ ಯಾರದ್ದು? ಬಿಬಿಎಂಪಿ, ವಕ್ಫ್‌ಬೋರ್ಡ್ ಹಗ್ಗಜಗ್ಗಾಟ!

Related Video