Asianet Suvarna News Asianet Suvarna News

ಈದ್ಗಾ ಮೈದಾನ ಯಾರದ್ದು? ಬಿಬಿಎಂಪಿ, ವಕ್ಫ್‌ಬೋರ್ಡ್‌ ಹಗ್ಗಜಗ್ಗಾಟ!

* ಸುಪ್ರೀಂಕೋರ್ಟ್‌ ಆದೇಶ ಪ್ರಸ್ತಾಪಿಸಿ ಜಾಗ ತಮ್ಮದೆಂದ ವಕ್ಫ್‌ಬೋರ್ಡ್‌

* ಈದ್ಗಾ ಮೈದಾನ ಯಾರದ್ದು? ಬಿಬಿಎಂಪಿ, ವಕ್ಫ್ಬೋರ್ಡ್‌ ಹಗ್ಗಜಗ್ಗಾಟ

* ದಾಖಲೆಗಳಿದ್ದರೆ ಸಲ್ಲಿಸಲಿ ಎಂದ * ಬಿಬಿಎಂಪಿ

Tug of war between waqf board and BBMP for Idgah Maidan pod
Author
Bangalore, First Published Jun 8, 2022, 6:17 AM IST

ಬೆಂಗಳೂರು(ಜೂ.08): ಚಾಮರಾಜ ಪೇಟೆಯ ಈದ್ಗಾ ಮೈದಾನ ತಮ್ಮ ಸ್ವತ್ತು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದ ಬೆನ್ನಲ್ಲೇ ಮುಸ್ಲಿಂ ಸಂಘಟನೆಗಳು ಮತ್ತು ಮುಖಂಡರು ಈದ್ಗಾ ಮೈದಾನ ಆಸ್ತಿ ವಕ್ಫ್ಬೋರ್ಡ್‌ಗೆ ಸೇರಿದ್ದೆಂದು ದಾಖಲೆ ಸಮೇತ ಸಮರ್ಥನೆಗೆ ಇಳಿದಿವೆ. ತನ್ಮೂಲಕ ಈದ್ಗಾ ಮೈದಾನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.

ಮಂಗಳವಾರ ವಕ್ಫ್ ಬೋರ್ಡ್‌ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ಈದ್ಗಾ ಮೈದಾನಕ್ಕೆ ಸಂಬಂಧಪಟ್ಟದಾಖಲೆ ಬಿಡುಗಡೆ ಮಾಡಿದ್ದು ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಲ್ಲ ವಕ್ಫ್ ಮಂಡಳಿ ಆಸ್ತಿ. ವಕ್ಫ್ ಗೆಜೆಟ್‌ನಲ್ಲಿ ಈ ಬಗ್ಗೆ ದಾಖಲಾಗಿದೆ. ಇಂತಹ ಜಾಗದಲ್ಲಿ ಬೇರೆ ಸಮುದಾಯಗಳ ಹಬ್ಬ ಆಚರಣೆಗೆ ಬೇರೆಯವರಿಗೆ ಹೇಗೆ ಅವಕಾಶ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೌಲಾನಾ ಶಾಫಿ ಸಅದಿ ಅವರು, ಬಿಬಿಎಂಪಿ ಕಳೆದು ಹೋದ ಆಟದ ಮೈದಾನವನ್ನು ಹುಡುಕಲಿ. ಅದು ಬಿಟ್ಟು ನಮ್ಮ ವಕ್ಫ್ ಆಸ್ತಿಯನ್ನು ಆಟದ ಮೈದಾನ ಎನ್ನುವುದು ಬೇಡ ಎಂದಿದ್ದಾರೆ. ಜೊತೆಗೆ ವಕ್ಫ್ ಬೋರ್ಡ್‌ ಆಸ್ತಿಯಲ್ಲಿ ಬೇರೆಯವರಿಗೆ ಅವಕಾಶ ನೀಡುವುದಿಲ್ಲ. ಸುಪ್ರೀಂ ಆದೇಶದ ಪ್ರಕಾರ ಈದ್ಗಾ ಮೈದಾನ ವಕ್ಫ್ ಬೋರ್ಡ್‌ ಆಸ್ತಿ. ಇಲ್ಲಿ ಇತರೆ ಕಾರ್ಯಕ್ರಮ ಆಯೋಜನೆಗೂ ಮೊದಲು ಯೋಚನೆ ಮಾಡಲಿ. ಇಲ್ಲದಿದ್ದರೆ ಕೋಮು ಗಲಭೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರತಿ ವರ್ಷ ಮಸೀದಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ. ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಕ್ಫ್ನವರು ಮಾಡುತ್ತಾರೆ. ಇಲ್ಲವೇ ಸ್ಥಳೀಯ ಶಾಸಕರಹಿಂದೂ ಸಂಘಟನೆಗಳಿಂದ ಅರ್ಜಿ

ಈ ನಡುವೆಯೇ ಹಿಂದೂ ಸಂಘಟನೆಗಳು ಮೈದಾನದಲ್ಲಿ ಹಬ್ಬ ಮಾಡುವುದಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲು ಮುಂದಾಗಿವೆ. ಶ್ರೀರಾಮ ಸೇನೆಯು ಪಾಲಿಕೆಗೆ ಅರ್ಜಿ ಸಲ್ಲಿಸಿ ಜೂನ್‌ 21ರಂದು ಯೋಗ ದಿನವನ್ನು ಆಚರಿಸಲು ಅನುಮತಿ ಕೋರಿದೆ. ಹಾಗೆಯೇ ಹಿಂದು ಸಂಘಟನೆಯೊಂದು ಜೂನ್‌ 14 ಮತ್ತು 15 ರಂದು ಸ್ವಾತಂತ್ರ್ಯೋತ್ಸವದ ಆಚರಣೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದೆ ಎಂದು ಪಶ್ಚಿಮ ವಲಯದ ಅಧಿಕಾರಿಗಳು ಮಾಹಿತಿ ನೀಡಿದರು.

ವಿವಾದವಾಗುತ್ತಿರುವುದು ಏಕೆ?

*ಮೈಸೂರು ಸಂಸ್ಥಾನದ ಆಡಳಿತ ಕಾಲದಲ್ಲಿ ಈ ಸ್ವತ್ತಿನ ಮಾಲೀಕರು ಕಾರ್ಪೋರೇಷನ್‌ ಎಂದು ಉಲ್ಲೇಖ

*ಬಿಬಿಎಂಪಿ ದಾಖಲೆಯಲ್ಲಿ ಬಿಬಿಎಂಪಿ ಆಟದ ಮೈದಾನ ಎಂದು ಉಲ್ಲೇಖ

*ವಕ್ಫ್ ಬೋರ್ಡ್‌ ದಾಖಲೆಯಲ್ಲೂ ಈ ಆಸ್ತಿ ವಕ್ಫ್ಗೆ ಸೇರಿದ್ದು ಎಂದು ಉಲ್ಲೇಖ

Follow Us:
Download App:
  • android
  • ios