ತನಿಖೆ ನಡೆಯುತ್ತಿದ್ದು, ಈಗಲೇ ಉಗ್ರರು ಎಂದು ಹೇಳಲಾಗುವುದಿಲ್ಲ: ಡಾ.ಜಿ. ಪರಮೇಶ್ವರ್
ಐವರು ಶಂಕಿತ ಉಗ್ರರ ಬಗ್ಗೆ ತನಿಖೆ ನಡೆಯುತ್ತಿದೆ. ಈಗಲೇ ಉಗ್ರರು ಎಂದು ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಶಂಕಿತ ಐವರು ಉಗ್ರರನ್ನು (Suspected terrorist) ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwara) ಮಾತನಾಡಿದ್ದು, ಈಗಲೇ ಅವರನ್ನು ಟೆರರಿಸ್ಟ್ ಅಂತಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈಗಲೇ ಉಗ್ರರು ಅಂತಾ ಹೇಳಲು ಸಾಧ್ಯವಿಲ್ಲ. ಐವರನ್ನು ಸಿಸಿಬಿಯವರು(CCB) ಬಂಧಿಸಿದ್ದಾರೆ. ಅವರಿಂದ 7 ಕಂಟ್ರಿಮೇಡ್ ಪಿಸ್ತೂಲ್, ವಾಕಿ ಟಾಕಿ, ಆಯುಧಗಳು ಸಿಕ್ಕಿವೆ. ಕಾರಾಗೃಹದಲ್ಲೇ ಸ್ಕೆಚ್ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಐವರನ್ನು CCB ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮಾಡಿ ಟೆರರ್ ಲಿಂಕ್ ಇದೆಯಾ ಅಂತಾ ನೋಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಮೈತ್ರಿಗೆ ತಾತ್ಕಾಲಿಕ ಬ್ರೇಕ್: ಜೆಡಿಎಸ್‌ನಲ್ಲೇ ವಿರೋಧ...ಬಿಜೆಪಿಯಲ್ಲೂ ಅಪಸ್ವರ..!