ಮೈತ್ರಿಗೆ ತಾತ್ಕಾಲಿಕ ಬ್ರೇಕ್: ಜೆಡಿಎಸ್‌ನಲ್ಲೇ ವಿರೋಧ...ಬಿಜೆಪಿಯಲ್ಲೂ ಅಪಸ್ವರ..!
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಆರಂಭಿಕ ಹಿನ್ನಡೆ ಆದಂತೆ ಕಾಣುತ್ತಿದೆ. ಇದಕ್ಕೆ ಎರಡೂ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ ಎನ್ನಲಾಗ್ತಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ ಎನ್ನಲಾಗ್ತಿದೆ. ಮೈತ್ರಿಗೆ ಜೆಡಿಎಸ್‌ನಲ್ಲೇ (BJP) ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಬಿಜೆಪಿಯಲ್ಲೂ(BJP) ಇದಕ್ಕೆ ಅಪಸ್ವರ ಕೇಳಿ ಬರುತ್ತಿದೆ. ಒಂದು ತಿಂಗಳಿನಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ(alliance) ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಆದ್ರೆ ಎನ್‌ಡಿಎ ಮೈತ್ರಿ ಕೂಟದ ಸಭೆಗೆ(NDA alliance meeting) ಜೆಡಿಎಸ್‌ಗೆ ಆಹ್ವಾನ ಬಂದಿಲ್ಲ. 38 ಪಕ್ಷಗಳಿಗೆ ಆಹ್ವಾನ ಕೊಟ್ಟ ಬಿಜೆಪಿ ಜೆಡಿಎಸ್‌ಗೆ ಯಾಕೆ ಕೊಟ್ಟಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಇನ್ನೂ ಇದರ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಶಾಸಕರ ಜೊತೆ ಸಭೆಯನ್ನು ಸಹ ನಡೆಸಲಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿಯ 10 ಶಾಸಕರು ಅಮಾನತು: ಇಂದು ಪ್ರತಿಭಟನೆ ಮುಂದುವರೆಯುವ ಸಾಧ್ಯತೆ