
ಕಾಶ್ಮೀರ್ ಫೈಲ್ಸ್‌ಗಾಗಿ ಜೇಮ್ಸ್ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು
* ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು
* ಥಿಯೇಟರ್‌ನಿಂದ ಜೇಮ್ಸ್ ತೆರವಿಗೆ ಯಾರೂ ಹೇಳಿಲ್ಲ
* ಜೇಮ್ಸ್ ಚಿತ್ರಕ್ಕೆ ಆರ್‌ಆರ್‌ಆರ್ ಚಿತ್ರ ಕಂಟವಾಗುತ್ತಾ?
ಬೆಂಗಳೂರು(ಮಾ.23): ಜೇಮ್ಸ್ ಚಿತ್ರವನ್ನ ಯಾವ ಚಿತ್ರಮಂದಿರದಲ್ಲೂ ತೆಗೆದಿಲ್ಲ, ಜೇಮ್ಸ್ ತೆರವು ವಿಚಾರವಲ್ಲ ಸುಳ್ಳು ಕೇವಲ ಊಹಾಪೋಹಗಳು, ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು. ಥಿಯೇಟರ್‌ನಿಂದ ಜೇಮ್ಸ್ ತೆರವಿಗೆ ಯಾರೂ ಹೇಳಿಲ್ಲ. ಜೇಮ್ಸ್ ಚಿತ್ರವೇ ಬೇರೆ ಕಾಶ್ಮೀರ್ ಫೈಲ್ಸ್ ಚಿತ್ರವೇ ಬೇರೆಯಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಜೇಮ್ಸ್ ಚಿತ್ರಕ್ಕೆ ಆರ್‌ಆರ್‌ಆರ್ ಚಿತ್ರ ಕಂಟವಾಗುತ್ತಾ ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದೇ ಶುಕ್ರವಾರ ಆರ್‌ಆರ್‌ಆರ್ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
'ಕಾಶ್ಮೀರ್ ಫೈಲ್ಸ್‌ಗಾಗಿ ಜೇಮ್ಸ್ ಎತ್ತಂಗಡಿ: ಥಿಯೇಟರ್ ಮಾಲೀಕರಿಗೆ ಬಿಜೆಪಿಗರಿಂದಲೇ ಒತ್ತಡ'