
'ಕಾಶ್ಮೀರ್ ಫೈಲ್ಸ್‌ಗಾಗಿ ಜೇಮ್ಸ್ ಎತ್ತಂಗಡಿ: ಥಿಯೇಟರ್ ಮಾಲೀಕರಿಗೆ ಬಿಜೆಪಿಗರಿಂದಲೇ ಒತ್ತಡ'
* ಪುನೀತ್ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ
* ಕಾಶ್ಮೀರ್ ಫೈಲ್ಸ್ ಚಿತ್ರಲ್ಲೆ ತೆರಿಗೆ ವಿನಾಯ್ತಿ ಕೊಡುವಂತದ್ದು ಏನಿದೆ?
* ಜೇಮ್ಸ್ ಎತ್ತಂಗಡಿಗೆ ಹುನ್ನಾರ
ಬೆಂಗಳೂರು(ಮಾ.23): ಕಾಶ್ಮೀರ್ ಫೈಲ್ಸ್‌ಗಾಗಿ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಎತ್ತಂಗಡಿಗೆ ಹುನ್ನಾರ ನಡೆದಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ಹಾಕುವಂತೆ ಬಿಜೆಪಿ ಶಾಸಕರರೇ ಒತ್ತಾಯ ಮಾಡುತ್ತಿದ್ದಾರೆ. ಸ್ವತಃ ಚಿತ್ರಮಂದಿರಗಳ ಮಾಲೀಕರು ನನಗೆ ಕರೆ ಮಾಡಿದ್ದರು. ಚಿತ್ರಮಂದಿರಗಳ ಮಾಲೀಕರಿಂದ ಬಿಜೆಪಿ ಶಾಸಕರು, ಸಚಿವರಿಂದ ಒತ್ತಡ ಇದೆ ಅಂತ ಆರೋಪಿಸಿದ್ದಾರೆ. ಪುನೀತ್ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಕಾಶ್ಮೀರ್ ಫೈಲ್ಸ್ ಚಿತ್ರಲ್ಲೆ ತೆರಿಗೆ ವಿನಾಯ್ತಿ ಕೊಡುವಂತದ್ದು ಏನಿದೆ ಅಂತ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
Suvarna News Impact: ಅಕ್ರಮ ಮನೆಗಳು ನೆಲಸಮ, 1,42 ಎಕರೆ ಜಾಗ ಮತ್ತೆ ಸರ್ಕಾರದ ಸ್ವಾಧೀನಕ್ಕೆ