ಮತ್ತೊಂದು ಹಗರಣ ಬಯಲು! RTOನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಸರ್ಕಾರದ ಮೌನ?

ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕತ್ತರಿ ಹಾಕಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಈ ವಿಚಾರದಲ್ಲಿ ಮೌನವಾಗಿ ಕುಳಿತುಕೊಂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜುಲೈ 5): ಆದಾಯ ತರುವಂಥ ಇಲಾಖೆಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ವರದಿಯಾಗಿದೆ. ತೆರಿಗೆ ಕಟ್ಟಿಸಿಕೊಳ್ಳದೆ ಸರ್ಕಾರಕ್ಕೆಕೋಟಿ ಕೋಟಿ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಭಾವಿಗಳ ತೆರಿಗೆ ವಂಚನೆಗೆ ಸರ್ಕಾರಿ ಅಧಿಕಾರಿಗಳೇ ಇಲ್ಲಿ ಸಾಥ್‌ ನೀಡಿದ್ದಾರೆ.

ರಾಜ್ಯದ ಆರ್‌ಟಿಒ (RTO Office) ಕಚೇರಿಯಿಂದಲೇ ಸರ್ಕಾರಕ್ಕೆ ಮಹಾಮೋಸವಾಗಿರುವ ಪ್ರಕರಣ ವರದಿಯಾಗಿದೆ. ಐಷಾರಾಮಿ ಕಾರುಗಳ ಲೈಫ್‌ ಟ್ಯಾಕ್ಸ್ (Life Tax), ಸೆಸ್‌ ಪಾವತಿಸದೆ ವಂಚನೆ ಮಾಡಿರುವ ಘಟನೆ ನಡೆದಿದೆ. ರಾಜ್ಯದ ಬೇರೆ ಬೇರೆ ಆರ್‌ಟಿಓ ಕಚೇರಿಗಳಲ್ಲಿ ಈ ವಂಚನೆ ನಡೆದಿದೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ನೋಂದಣಿ ಮಾಡಿಕೊಳ್ಳಲಾಗಿದೆ.

ಸಾರಿಗೆ ಇಲಾಖೆಯ ಆನ್‌ಲೈನ್ ವಾಹನ ಸೇವೆಗೆ ಅಧಿಕಾರಿಗಳ ವಿರೋಧ: 1.7 ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ

ತೆರಿಗೆ ವಂಚನೆಯಲ್ಲಿ ಕಾರು ಮಾಲೀಕರಿಗೆ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. ಒಟ್ಟಾರೆ ಅರ್‌ಟಿಓ ಕಚೇರಿಯಿಂದ 100 ಕೋಟಿ ರೂಪಾಯಿ ತೆರಿಗೆ ವಂಚನೆ ಆಗಿರುವ ಮಾಹಿತಿ ಸಿಕ್ಕಿದೆ.
ಕೋರಮಂಗಲ ಆರ್‌ಟಿಒನಲ್ಲಿ 100 ಕಾರುಗಳಿಂದ ತೆರಿಗೆ ವಸೂಲಿ ಮಾಡದೆ ಅಧಿಕಾರಿಗಳು ನೋಂದಣಿ ಮಾಡಿದ್ದಾರೆ. ಆದರೆ, ಆರ್‌ಟಿಓ ಕಚೇರಿಗಳ ಮಹಾಮೋಸಕ್ಕೆ ಸರ್ಕಾರ ದಿವ್ಯ ಮೌನ ವಹಿಸಿದೆ. ತೆರಿಗೆ ವಂಚನೆಗೆ ಸಹಕರಿಸಿದವರಿಗೆ ಸರ್ಕಾರ ಶಿಕ್ಷೆ ನೀಡೋದಿಲ್ವಾ? ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ಸರ್ಕಾರ ನಿಂತಿದೆಯೇ ಎನ್ನುವ ಅನುಮಾನ ಕಾಡಿದೆ. 

Related Video