ಹಿಜಾಬ್‌, ಹಲಾಲ್‌ ಬಳಿಕ ಈಗ ಮಸೀದಿಗಳ ಮೈಕ್‌ ವಿರುದ್ಧ ಹಿಂದೂ ಸಂಘಟನೆಗಳ ಕಿಚ್ಚು!

*  ರಾಜ್ಯದಲ್ಲಿ ಆರಂಭವಾದ ಮತ್ತೊಂದು ಧರ್ಮ ಯುದ್ಧ
*  ಮಸೀದಿ, ದೇವಸ್ಥಾನಗಳ ಮೈಕ್‌ ಬಗ್ಗೆ ಕಾನೂನು ಹೇಳೋದೇನು?
*  ಮಸೀದಿಗಳ ಮೇಲಿನ ಮೈಕ್‌ಗಳಿಂದ ಜನರಿಗೆ ಕಿರಿಕಿರಿ 

First Published Apr 21, 2022, 11:23 AM IST | Last Updated Apr 21, 2022, 11:24 AM IST

ಬೆಂಗಳೂರು(ಏ.21):  ಹಿಜಾಬ್‌, ಹಲಾಲ್‌ ನಂತರ ಆಜಾನ್‌ ವಿರುದ್ಧ ಸಮರ ಆರಂಭವಾಗಿದೆ. ಹೌದು, ಈ ಮೂಲಕ ರಾಜ್ಯದಲ್ಲಿ ಆರಂಭವಾಗಿದೆ ಮತ್ತೊಂದು ಧರ್ಮ ಯುದ್ಧ.  ಮಸೀದಿ, ದೇವಸ್ಥಾನಗಳ ಮೈಕ್‌ ಬಗ್ಗೆ ಕಾನೂನು ಹೇಳೋದೇನು?, ಹಿಜಾಬ್‌ ಹೊತ್ತಿಸಿದ ಕಿಚ್ಚು ಎಲ್ಲಿಗೆ ಹೋಗಿ ಮುಟ್ಟುತ್ತೆ? ಎಂಬ ಎಂಬ ಚರ್ಚೆ ಶುರುವಾಗಿದೆ. ಮಸೀದಿ ಮೈಕ್‌ಗಳ ಆಜಾನ್‌ ವಿರುದ್ಧ ಹಿಂದೂ ಸಂಘಟನೆಗಳು ಕಿಚ್ಚು ಹೊತ್ತಿಸಿವೆ. ಮಸೀದಿಗಳ ಮೇಲಿನ ಮೈಕ್‌ಗಳಿಂದ ಜನರಿಗೆ ಕಿರಿಕಿರಿ ಉಂಟಾಗುತ್ತದೆ ಅನ್ನೋದು ಹಿಂದೂ ಸಂಘಟನೆಗಳ ವಾದವಾಗಿದೆ. ಮಸೀದಿ ಮೈಕ್‌ನಿಂದ ಭಾರೀ ಶಬ್ಧ ಮಾಲಿನ್ಯ ಆಗುತ್ತದೆ ಅಂತ ಆರೋಪಿಸಿವೆ. 

ಸಂತೋಷ್‌ ಆತ್ಮಹತ್ಯೆ ಪ್ರಕರಣ: ಕಾಮಗಾರಿಗೆ ಅನುಮತಿ ನೀಡಿದ್ರಾ ಅಧಿಕಾರಿಗಳು?

Video Top Stories