ಅನ್ನಭಾಗ್ಯ ಫಲಾನುಭವಿಗಳ ಖಾತೆಗ ಹಣ ವರ್ಗಾವಣೆ: ಜುಲೈ ಅಂತ್ಯದೊಳಗೆ ಎಲ್ಲಾರಿಗೂ ಮನಿ

ಅನ್ನಭಾಗ್ಯ ಯೋಜನೆಯಡಿ ಈವರೆಗೆ ಸರ್ಕಾರದಿಂದ 28 ಲಕ್ಷ ಮಂದಿಗೆ ಹಣವನ್ನು ಜಮಾ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಅನ್ನಭಾಗ್ಯ ಯೋಜನೆಯನ್ನು(Anna Bhagya Yojana) ಜಾರಿಗೊಳಿಸಿದೆ. ಈ ಯೋಜನೆಯಡಿ ಇಲ್ಲಿಯವರೆಗೆ 28 ಲಕ್ಷ ಕುಟುಂಬಕ್ಕೆ ಹಣವನ್ನು ಹಾಕಲಾಗಿದೆ. ಫಲಾನುಭವಿಗಳಿಗೆ 5 ಕೆಜಿ ಅಕ್ಕಿ(Rice) ಜೊತೆ 170 ರೂಪಾಯಿ ಹಣವನ್ನು ಜಮಾ ಮಾಡಲಾಗಿದೆ. ಜುಲೈ ಅಂತ್ಯದೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣವನ್ನು ಹಾಕಲಾಗುವುದು. ಆದ್ರೆ ಇನ್ನೂ ಹಲವು ಕಾರ್ಡ್‌ದಾರರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌(Adhar link) ಆಗಿಲ್ಲ. ಅಲ್ಲದೇ ಹಣ ಜಮೆ ಆಗಿದೆಯಾ ಇಲ್ಲ ಎಂಬುದನ್ನು ನೀವು https://ahara.kar.nic.in/status1/status_of_dbt.aspx ಈ ವೆಬ್‌ಸೈಟ್‌ಗೆ ಹೋಗಿ ಚೆಕ್‌ ಮಾಡಬಹುದಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ವರ್ಷ, ತಿಂಗಳು ಹಾಗೂ ಪಡಿತರ ಚೀಟಿಯ ಆರ್‌ಸಿ ಸಂಖ್ಯೆಯನ್ನು ನಮೂದು ಮಾಡಬೇಕು. ನಂತರ ಗೋ ಎಂಬ ಆಯ್ಕೆಯನ್ನು ಮಾಡಿದರೆ ಮಾಹಿತಿ ಲಭ್ಯವಾಗಲಿದೆ.

ಇದನ್ನೂ ವೀಕ್ಷಿಸಿ: ಚಂದ್ರಯಾನ 3 ಉಡಾವಣೆಗೆ ಸಕಲ ಸಿದ್ದತೆ: ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾದ ವಿಜ್ಞಾನಿಗಳು

Related Video