ಚಂದ್ರಯಾನ 3 ಉಡಾವಣೆಗೆ ಸಕಲ ಸಿದ್ದತೆ: ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾದ ವಿಜ್ಞಾನಿಗಳು
ಇಂದು ಮಧ್ಯಾಹ್ನ ಚಂದ್ರಯಾನ 3 ರಾಕೆಟ್ ಉಡಾವಣೆ, ಶ್ರೀಹರಿಕೋಟಾದಿಂದ ಆಗಲಿದೆ.
ಇಸ್ರೋದ ಅತ್ಯಂತ ಮಹತ್ವಾಕಾಂಕ್ಷಿ ಚಂದ್ರಯಾನ 3(Chandrayaan 3) ಚಂದ್ರನ ಕಡೆಗೆ ಹಾರಲು ಕೌಂಟ್‌ಡೌನ್ ಶುರುವಾಗಿದೆ. ಈ ಮೂಲಕ ಮತ್ತೊಂದು ಮೈಲಿ ಗಲ್ಲು ಬರೆಯಲು ಇಸ್ರೋ(ISRO) ವಿಜ್ಞಾನಿಗಳು ಮುಂದಾಗಿದ್ದಾರೆ. ಇಂದು ಶ್ರೀಹರಿಕೋಟಾದಿಂದ ಚಂದ್ರಯಾನ 3 ರಾಕೆಟ್ ಉಡಾವಣೆಯಾಗಲಿದೆ. ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಪ್ರತಿ ಉಡಾವಣೆಗೂ ಇಸ್ರೋ ವಿಜ್ಞಾನಿಗಳು ತಿರುಮಲನ ಆಶೀರ್ವಾದ ಪಡೆಯುತ್ತಾರೆ. 2008ರಲ್ಲೇ ಚಂದ್ರನ(Moon) ಮೇಲೆ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಇಳಿಸಿದ್ದರು. ಲಡಾಖ್ ಸೈನ್ಸ್ ಫೌಂಡೇಶನ್ (LSF) ಚಂದ್ರಯಾನ 3 ವೀಕ್ಷಣೆಗೆ ಬೆಂಗಳೂರಿನಿಂದ 130 ಜನರನ್ನು ಕರೆದೊಯ್ಯುತ್ತಿದ್ದು, 100 ಕ್ಕೂ ಹೆಚ್ಚು ಕನ್ನಡಿಗರು ಈ ಗುಂಪಿನಲ್ಲಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ನೋಡಿದ ಇಸ್ರೋ ಸುಮಾರು 10,000 ಜನರಿಗೆ ಅವಕಾಶ ಕಲ್ಪಿಸುವ 'ಲಾಂಚ್ ವ್ಯೂಯಿಂಗ್ ಗ್ಯಾಲರಿ' ನಿರ್ಮಿಸಿದೆ.ಬೆಂಗಳೂರು ನಗರದ ನೆಹರೂ ತಾರಾಲಯದಲ್ಲಿ ಚಂದ್ರಯಾನದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ವೀಕ್ಷಿಸಿ: ರೌಡಿ ಶೀಟರ್ ಕಪಿಲ್ ಭೀಕರ ಹತ್ಯೆ: ಕ್ಯಾಮೆರಾ ಕಣ್ಣಲ್ಲಿ ಹಂತಕರ ಕೌರ್ಯ