ಅವರೇನಾ ಮಹಾ ಷಡ್ಯಂತ್ರದ ಮೂಲ ಪುರುಷ? ಬುರುಡೆ ಚಕ್ರವ್ಯೂಹ ಹೆಣೆದರಾ ತಮಿಳುನಾಡಿನ ಸಂಸದ?

ಅನನ್ಯಾ ಭಟ್ ನಾಪತ್ತೆ ಪ್ರಕರಣವು ತಿರುವು ಪಡೆದುಕೊಂಡಿದ್ದು, ಇದು ಒಂದು ದೊಡ್ಡ ಷಡ್ಯಂತ್ರ ಎಂದು ಬಹಿರಂಗವಾಗಿದೆ. ಸುಜಾತಾ ಭಟ್ ತೋರಿಸಿದ ಫೋಟೋದ ಹುಡುಗಿ ಹುಟ್ಟೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಸುಳ್ಳಿನ ನಾಟಕದ ಹಿಂದೆ ತಮಿಳುನಾಡಿನ ಸಂಸದರ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.21): ಬಹುದಿನಗಳಿಂದ ಕುತೂಹಲ ಮೂಡಿಸಿದ್ದ 'ಅನನ್ಯಾ ಭಟ್ ಮಿಸ್ಸಿಂಗ್ ಮಿಸ್ಟರಿ' ಪ್ರಕರಣವು ಇದೀಗ ಪಕ್ಕಾ ಸಿನಿಮಾ ಕಥೆಯಂತೆ ತಿರುವು ಪಡೆದುಕೊಂಡಿದೆ. ಇದು ಹುಟ್ಟು ಸುಳ್ಳು, ಫೋಟೋ ಸುಳ್ಳು ಮತ್ತು ಒಂದು ದೊಡ್ಡ ಷಡ್ಯಂತ್ರದ ಭಾಗ ಎಂದು ವರದಿಗಳು ಬಹಿರಂಗಪಡಿಸಿವೆ. ಈ ಇಡೀ ಬುರುಡೆ ಕಥೆಯ ಸೂತ್ರಧಾರ ತಮಿಳುನಾಡಿನ ಸಂಸದ ಎಂದು ಬಿಜೆಪಿ ಆರೋಪಿಸಿದ್ದು, ಈ ಆರೋಪ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಹಣದಾಸೆಗೆ ಹೆಣ್ಣು-ಹೆಣ ಕಥೆ? ಅನನ್ಯಾ ಭಟ್ – ಸುಜಾತ ರಹಸ್ಯ ಬಯಲಿಗೆ!

ಅನನ್ಯಾ ಭಟ್ ಎಂಬುವವರನ್ನು ತನ್ನ ಮಗಳು ಎಂದು ಹೇಳಿಕೊಂಡಿದ್ದ ಸುಜಾತಾ ಭಟ್, ಆಕೆಯ ಫೋಟೋ ತೋರಿಸಿ ಈ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದರು. ಆದರೆ, 'ಸುಳ್ಳಿನ ಸಾಮ್ರಾಜ್ಯ' ಎಂದು ಬಣ್ಣಿಸಲಾದ ಈ ಕಥೆಯಲ್ಲಿ ಅನನ್ಯಾ ಭಟ್ ಹುಟ್ಟೇ ಇಲ್ಲ ಎಂದು ಸುಜಾತಾ ಭಟ್ ಅವರ ಬಾವನೇ ಹೇಳಿಕೆ ನೀಡಿದ್ದಾರೆ.

ಸುಜಾತಾ ಭಟ್ ಅವರು 2003ರಲ್ಲಿ ಕೊಲ್ಕತ್ತಾದಲ್ಲಿ ಸಿಬಿಐ ಸ್ಟೆನೋಗ್ರಾಫರ್ ಆಗಿದ್ದೆ ಎಂದು ಹೇಳಿಕೊಂಡರೆ, ಆ ಸಮಯದಲ್ಲಿ ಅವರು ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದರು ಮತ್ತು ಅವರಿಗೆ ಮಕ್ಕಳಿರಲಿಲ್ಲ ಎಂದು ಸಾಕ್ಷಿಗಳು ಹೇಳುತ್ತಿವೆ.

Related Video