Amit Shah: ಸುತ್ತೂರು ಮಠ ಲಿಂಗಾಯತ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದೆ: ಅಮಿತ್ ಶಾ

ಪವಿತ್ರ ಭೂಮಿಯಲ್ಲಿ ನಿಂತು ಬಸವಣ್ಣಗೆ ನಮಸ್ಕರಿಸುವೆ
ವಚನಗಳ ಮೂಲಕ ಕೋಟಿ ಕೋಟಿ ಜನರಿಗೆ ಜೀವನ ಮಾರ್ಗ
ಸುತ್ತೂರು ಶ್ರೀಗಳು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ-ಅಮಿತ್‌ ಶಾ

First Published Feb 11, 2024, 4:14 PM IST | Last Updated Feb 11, 2024, 4:15 PM IST

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ(Sutturu Jatra Mahotsava) ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಭಾಗಿಯಾಗಿ, ಮಾತನಾಡಿದ್ರು. ಮೊದಲಿಗೆ ಅಮಿತ್ ಶಾ ಬಸವಣ್ಣನವರನ್ನು ನೆನೆದರು. ಸುತ್ತೂರು ಮಠ ಲಿಂಗಾಯತ(Lingayath) ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಕರ್ನಾಟಕದ(Karnataka) ಪವಿತ್ರ ಭೂಮಿಯಲ್ಲಿ ನಿಂತು ಬಸವಣ್ಣಗೆ(Basavanna) ನಮಸ್ಕರಿಸುವೆ ಎಂದು ಅಮಿತ್‌ ಶಾ ಹೇಳಿದರು. ವಚನಗಳ ಮೂಲಕ ಕೋಟಿಕೋಟಿ ಜನರಿಗೆ ಜೀವನ ಮಾರ್ಗವನ್ನು ಬಸವಣ್ಣ ತೋರಿದ್ದಾರೆ. ಸುತ್ತೂರು ಶ್ರೀಗಳು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ದಿವ್ಯಾಂಗರಿಗೆ ಪಾಲಿಟೆಕ್ನಿಕ್ ಕಾಲೇಜ್ ಮಾಡಿದ್ದು ದೊಡ್ಡ ಸಾಧನೆಯಾಗಿದೆ. ದಿವ್ಯಾಂಗರಿಗಾಗಿ ಕಾಲೇಜು ಮಾಡಿದ್ದಕ್ಕೆ ಶ್ರೀಗಳಿಗೆ ನಮನ ಸಲ್ಲಿಸುತ್ತೇನೆ. ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದಿಸುತ್ತೇನೆ. ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭವಾಗಲಿದೆ. ಮೋದಿಯಿಂದ ಸಾಂಸ್ಕೃತಿಕ ಕ್ಷೇತ್ರ ಪುನರುಜ್ಜೀವನವಾಗಲಿದೆ ಎಂದು ಅಮಿತ್ ಶಾ ಹೇಳಿದರು.

ಇದನ್ನೂ ವೀಕ್ಷಿಸಿ:  Hubli: 11 ಜನರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಹಣಕ್ಕಾಗಿ ಕಾಯುವ ರಕ್ಷಕರೇ ರೌಡಿಗಳಂತೆ ವರ್ತಿಸಿದ್ರಾ ?