'ರೈತರ ಜೊತೆ ಒಂದು ದಿನ'; ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಹೊಸ ಕಾರ್ಯಕ್ರಮ

ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಕೃಷಿ ಸಚಿವರು ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಗ್ರಾಮ ವಾಸ್ತವ್ಯದಂತೆ 'ರೈತರ ಜೊತೆ ಒಂದು ದಿನ' ಎಂಬ ಕಾರ್ಯಕ್ರಮ ನಡೆಸಲಿದ್ದಾರೆ. 

First Published Nov 12, 2020, 4:37 PM IST | Last Updated Nov 12, 2020, 4:37 PM IST

ಬೆಂಗಳೂರು (ನ. 12): ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಕೃಷಿ ಸಚಿವರು ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಗ್ರಾಮ ವಾಸ್ತವ್ಯದಂತೆ 'ರೈತರ ಜೊತೆ ಒಂದು ದಿನ' ಎಂಬ ಕಾರ್ಯಕ್ರಮ ನಡೆಸಲಿದ್ದಾರೆ. ನ. 14 ರಿಂದ ಈ ಕಾರ್ಯಕ್ರಮ ಶುರುವಾಗಲಿದೆ. ಕೆ. ಆರ್ ಪೇಟೆ ಪಡವಿನಕೋಡಿ ಗ್ರಾಮದಿಂದ ಪ್ರಾರಂಭವಾಗಲಿದೆ. 

'ಚಿರು ಬೂದಿ ಮುಚ್ಚಿದ ಕೆಂಡದಂತೆ'; ನೋವು ಮರೆಯೋದು ಅಸಾಧ್ಯ ಎಂದ ಮೇಘನಾ

ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರತಿ ತಿಂಗಳು ರೈತರ ಒಂದು ದಿನ ಇರಲಿದ್ದಾರೆ. ಅವರ ಕಷ್ಟ ಸುಖಗಳನ್ನು ಆಲಿಸಲಿದ್ದಾರೆ. ಆತ್ಮಸ್ಥೈರ್ಯ ತುಂಬುವುದು, ಆತ್ಮಹತ್ಯೆ ತಡೆಗಟ್ಟುವುದು, ಕೃಷಿ ಚಟುವಟಿಕೆಗಳಲ್ಲಿ ಯುವಕರಿಗೆ ಪ್ರೋತ್ಸಾಹ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.