ಹಿಂದೂ ಸಂಘಟನೆಗಳ ಎಚ್ಚರಿಕೆಗೆ ಬೆದರಿ ಬಣ್ಣ ಬದಲಿಸಿದ ರೈಲ್ವೇ ಇಲಾಖೆ!

ಹಿಂದೂ ಸಂಘಟನೆಗಳ ವಾರ್ನಿಂಗ್‌ಗೆ ಬೆದರಿ ರೈಲ್ವೇ ಸ್ಟೇಶನ್‌ಗೆ ಕೊಟ್ಟಿದ್ದ ಹಸಿರು ಬಣ್ಣವನ್ನು ಬದಲಿಸಿ ಬಿಳಿ ಬಣ್ಣ ಕೊಟ್ಟಿದೆ ರೈಲ್ವೇ ಇಲಾಖೆ.

Share this Video
  • FB
  • Linkdin
  • Whatsapp

ಕಲಬುರಗಿ (ಡಿ.13): ಹಿಂದು ಸಂಘಟನೆಗಳು ನೀಡಿದ ಎಚ್ಚರಿಕೆಯ ಬೆನ್ನಲ್ಲಿಯೇ ಕಲಬುರಗಿ ರೈಲ್ವೇ ನಿಲ್ದಾಣಕ್ಕೆ ಬಳಿಯಲಾಗಿದ್ದ ಹಸಿರು ಬಣ್ಣವನ್ನು ತೆಗೆದು ಬಿಳಿ ಬಣ್ಣವನ್ನು ಬಳಿಯಲಾಗಿದೆ. ಹಸಿರು ಬಣ್ಣವನ್ನು ತೆಗೆದು, ಮಂಗಳವಾರ ಬಿಳಿ ಬಣ್ಣವನ್ನು ಬಳಿದಿದ್ದಾರೆ. ಮೊದಲು ಕಟ್ಟಡಕ್ಕೆಅಧಿಕಾರಿಗಳು ಹಸಿರು ಬಣ್ಣವನ್ನು ಬಳಿದಿದ್ದರು. ಇದು ವಿವಾದಕ್ಕೆ ಈಡಾಗಿತ್ತು.

ಆದಷ್ಟು ಬೇಗ ಇದರ ಬಣ್ಣವನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ ರೈಲ್ವೆ ನಿಲ್ದಾಣದ ಮುಂಭಾಗ ಹಿಂದು ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಇದರ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ, ಹಸಿರು ಬಣ್ಣದ ಮೇಲೆಯೇ ಬಿಳಿ ಬಣ್ಣವನ್ನು ಬಳಿದಿದೆ.

ವಿಜಯಪುರದಲ್ಲೂ ಶುರುವಾಯ್ತು ಧರ್ಮ ಸಂಘರ್ಷ: ಧರ್ಮ ದಂಗಲ್‌ಗೆ ಸಾಕ್ಷಿಯಾಗುತ್ತಾ ಸಂಕ್ರಾಂತಿ ಜಾತ್ರೆ

ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಹಿಂದು ಜಾಗೃತಿ ಸೇನೆ ಪ್ರತಿಭಟನೆ ನಡೆಸಿ, ಬಣ್ಣವನ್ನು ಬದಲಿಸುವಂತೆ ಎಚ್ಚರಿಕೆ ನೀಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಇಲಾಖೆ ಈಗ ಬಣ್ಣವನ್ನು ಬದಲಿಸಿದೆ.

Related Video