ವಿಜಯಪುರದಲ್ಲೂ ಶುರುವಾಯ್ತು ಧರ್ಮ ಸಂಘರ್ಷ: ಧರ್ಮ ದಂಗಲ್‌ಗೆ ಸಾಕ್ಷಿಯಾಗುತ್ತಾ ಸಂಕ್ರಾಂತಿ ಜಾತ್ರೆ

ಸದ್ಯ ಎಲ್ಲೆಡೆ ಜಾತ್ರೆಗಳು, ಉತ್ಸವಗಳು, ಆರಾಧನೆಗಳು ಶುರುವಾಗಿವೆ. ಜೊತೆ ಜೊತೆಗೆ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತೆ ಧರ್ಮ ದಂಗಲ್‌ ಶುರುವಾಗಿದೆ. ಹಿಂದೂ ದೇಗುಲಗಳ ಜಾತ್ರೆಗಳಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

dharma dangal also entered the historic vijayapura district gvd

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ (ಡಿ.09): ಸದ್ಯ ಎಲ್ಲೆಡೆ ಜಾತ್ರೆಗಳು, ಉತ್ಸವಗಳು, ಆರಾಧನೆಗಳು ಶುರುವಾಗಿವೆ. ಜೊತೆ ಜೊತೆಗೆ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತೆ ಧರ್ಮ ದಂಗಲ್‌ ಶುರುವಾಗಿದೆ. ಹಿಂದೂ ದೇಗುಲಗಳ ಜಾತ್ರೆಗಳಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ನಡುವೆ ಉತ್ತರ ಕರ್ನಾಟಕದ ಪ್ರಸಿದ್ಧ ಅತಿ ದೊಡ್ಡ ಜಾತ್ರೆ ಎಂದು ಕರೆಯಿಸಿಕೊಳ್ಳುವ ವಿಜಯಪುರದ ಸಂಕ್ರಾಂತಿ ಜಾತ್ರೆ ಧರ್ಮ ದಂಗಲ್‌ ಗೆ ಸಾಕ್ಷಿಯಾಗುವ ಲಕ್ಷಣಗಳು ಕಾಣ ಸಿಗ್ತೀವೆ. ಹಿಂದೂ ಪರ ಸಂಘಟನೆಗಳು ಸಂಕ್ರಾಂತಿ ಜಾತ್ರೆಯಲ್ಲಿ ಹಿಂದೂಯೇತರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವಂತೆ ಆಗ್ರಹಿಸುತ್ತಿವೆ..

ಅತಿದೊಡ್ಡ ಜಾತ್ರೆಗೆ ಧರ್ಮ ದಂಗಲ್‌ ಕಂಟಕ?: ಉತ್ತರ ಕರ್ನಾಟಕದಲ್ಲೆ ವಿಜಯಪುರದ ಸಿದ್ದರಾಮೇಶ್ವರ ಜಾತ್ರೆ ಬಲು ಪ್ರಸಿದ್ಧಿ ಪಡೆದಿದೆ. ಸಂಕ್ರಾಂತಿಯಂದೆ ಸಿದ್ದೇಶ್ವರ ಜಾತ್ರೆ ನಡೆಯುವುದರಿಂದ ಸಂಕ್ರಾಂತಿ ಜಾತ್ರೆ ಅಂತಲು ಕರೆಯುತ್ತಾರೆ. ರಾಜ್ಯದಲ್ಲೆ ಅತಿ ಹೆಚ್ಚು ಜನ, ಜಾನುವಾರು ಸೇರುವ ಮತ್ತೊಂದು ಜಾತ್ರೆ ಅಂದ್ರೆ ಇದೆ ವಿಜಯಪುರದ ಸಿದ್ದರಾಮೇಶ್ವ ಜಾತ್ರೆ. ಆದ್ರೆ ಈ ಜಾತ್ರೆಗು ಧರ್ಮ ದಂಗಲ್‌ ಕಂಟಕ ಸುತ್ತಿಕೊಳ್ಳಲಿದೇಯಾ ಎನ್ನುವ ಅನುಮಾನಗಳು ದಟ್ಟವಾಗಿವೆ. ಈ ನಡುವೆ ಹಿಂದೂ ಪರ ಸಂಘಟನೆಗಳು ಈಗೀನಿಂದಲೇ ಜಾತ್ರೆಯಲ್ಲಿ ಹಿಂದೂ ಹೊರತು ಪಡೆಸಿ ಅನ್ಯರಿಗೆ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬಾರದು ಅಂತ ಆಗ್ರಹ ಮುಂದಿಟ್ಟಿದ್ದಾರೆ.

Vijayapura: ರಾಜ್ಯದ ಬಸ್‌ಗೆ ಮಸಿ ಬಳಿದಿದ್ದಕ್ಕೆ ಕರವೇ ಆಕ್ರೋಶ

ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮನವಿ: ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಿದ್ದೇಶ್ವರ ಜಾತ್ರೆ ಹಿನ್ನೆಲೆ ನಡೆದ ಸಂಸ್ಥೆಯ ಸಭೆಯಲ್ಲಿ ಇಂಥಹ ಒಂದು ಮನವಿಯನ್ನ ಇಟ್ಟಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ನಗರ ಶಾಸಕ ಬಸನಗೌಡ ಯತ್ನಾಳರನ್ನ ಭೇಟಿ ಮಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಈ ವರ್ಷ ಸಂಕ್ರಾಂತಿ ಜಾತ್ರೆಯಲ್ಲಿ ಹಿಂದೂ ಅಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಡಿ ಎಂದಿದ್ದಾರೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸೂಚನೆಗಳನ್ನ ನೀಡುವಂತೆಯು ಮನವಿ ಮಾಡಿಕೊಂಡಿದ್ದಾರೆ.

ಹಿಂದೂ ಸಂಘಟನೆಗಳ ಆಗ್ರಹ ಏನು?: ಶ್ರೀರಾಮ ಸೇನೆ ಹಾಗೂ ವಿಶ್ವ ಹಿಂದೂಪರಿಷತ್‌ ಹಿಂದೂಯೇತರರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಿರುವಂತೆ ಮನವಿ ನೀಡಿದ್ದು, ಮನವಿಯಲ್ಲಿ ಸಾಕಷ್ಟು ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. ರಾಜ್ಯದ ಹಲವು ಪ್ರದೇಶಗಳಲ್ಲಿ ನಡೆದ ಜಾತ್ರೆಗಳಲ್ಲಿ ಹಿಂದೂ ಅಲ್ಲದವರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಅದೇ ರೀತಿ ನಮ್ಮೂರ ಜಾತ್ರೆ ಎಂದು ಕರೆಯಲ್ಪಡುವ ಸಿದ್ದೇಶ್ವರ ಜಾತ್ರೆಯಲ್ಲು ಇದೆ ರೀತಿ ಕ್ರಮ ಅನುಸರಿಸಬೇಕು. ಮುಸ್ಲಿಂ ರು ದೇಶದ ಜನರ ಭಾವನೆಗೆ ಕಿಮ್ಮತ್ತು ನೀಡ್ತಿಲ್ಲ. ದೇಶದ ಕಾನೂನುಗಳಿಗು ಮುಸ್ಲಿಂ ರು ಗೌರವ ನೀಡ್ತಿಲ್ಲ. ಆಗಾಗ್ಗ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂಗಳ ಜಾತ್ರೆಗಳಲ್ಲಿ ಅವರಿಗೆ ಅವಕಾಶ ನೀಡಬಾರದು ಎಂದು ಮನವಿಯನ್ನ ಮುಂದಿಟ್ಟಿದ್ದಾರೆ.

ಮನವಿಯಲ್ಲಿ ಲವ್‌ ಜಿಹಾದ್‌, ಗೋ ಹತ್ಯೆ ಪ್ರಸ್ತಾಪ: ಇನ್ನು ಮನವಿಯಲ್ಲಿ ಶ್ರೀರಾಮ ಸೇನೆ ಸಂಘಟನೆ ಕೆಲ ವಿಚಾರಗಳನ್ನ ಪ್ರಸ್ತಾಪಿಸಿದೆ. ಶ್ರೀರಾಮ ಸೇನೆ ಪ್ರಸ್ತಾಪಿಸಿದಂತೆ ಮುಸ್ಲಿಂರು ಲವ್‌ ಜಿಹಾದ್‌ ಮಾಡುವ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನ ಮತಾಂತರಿಸಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನ ಲವ್‌ ಜಿಹಾದ್‌ ಮಾಡಿ ತುಂಡು ತುಂಡಾಗಿ ಕತ್ತರಿಸಿ ಹಾಕ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಶ್ರೀರಾಮ ಸೇನೆ ಪ್ರಸ್ತಾಪಿಸಿದೆ. ಇನ್ನು ಹಿಂದೂಗಳು ಪುಜ್ಯನೀಯವಾಗಿ ಕಾಣುವ ಗೋವನ್ನ ಹತ್ಯೆ ಮಾಡಿ ಭಕ್ಷಿಸುತ್ತಾರೆ. ಈ ಮೂಲಕ ಹಿಂದೂ ಭಾವನೆಗಳಿಗೆ ಬೆಲೆ ಕೊಡದವರಿಗೆ ಯಾಕೆ ಹಿಂದೂ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಶ್ರೀರಾಮ ಸೇನೆ ಹಾಗೂ ಹಿಂದೂ ಸಂಘಟನೆಗಳು ಪ್ರಶ್ನೆ ಮಾಡಿವೆ.

ಹಿಂದೂ ಸಂಘಟನೆಗಳ ಮನವಿಗೆ ಸಿಗತ್ತಾ ಸ್ಪಂದನೆ: ಸಂಕ್ರಾಂತಿ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರ್ತಾರೆ. ನೆರೆಯ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ-ಆಂಧ್ರ-ತೆಲಂಗಾಣದಿಂದಲು ಭಕ್ತರು ಪಾಲ್ಗೊಳ್ತಾರೆ. ಸ್ಟೆಶನರಿ, ಕಾಯಿ-ಕರ್ಪೂರ ಮಾರಾಟವನ್ನ ಹಿಂದೂಯೇತರರು ಮಾಡ್ತಾರೆ. ಪ್ರತಿ ವರ್ಷ ಯಾವುದೇ ಭೇಧವಿಲ್ಲದೆ ಜಾತ್ರೆ ನಡೆಯುತ್ತಾ ಬಂದಿದೆ. ಈ ನಡುವೆ ಶ್ರೀರಾಮ ಸೇನೆ ಹಾಗೂ ಹಿಂದೂಪರ ಸಂಘಟನೆಗಳು ಇಟ್ಟಿರುವ ಬೇಡಿಕೆಗೆ ಸಿದ್ದೇಶ್ವರ ಸಂಸ್ಥೆ ಸ್ಪಂದಿಸುತ್ತಾ ಅನ್ನೋದೆ ಈಗ ಇರುವ ಪ್ರಶ್ನೆಯಾಗಿದೆ.

ಮುಖ್ಯಪ್ರಾಣ ಎಂದರೆ ಜಾಫರ್‌ಗೆ ಪಂಚಪ್ರಾಣ: ಆಂಜನೇಯನ ಪರಮ ಭಕ್ತ ಈ ಮುಸ್ಲಿಂ ವ್ಯಕ್ತಿ!

ವಿಜಯಪುರ ಜಿಲ್ಲೆಯಲ್ಲಿ ವರ್ಕೌಟ್‌ ಆಗಿಲ್ಲ ಧರ್ಮದಂಗಲ್: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ ಬಾರಿ ಧರ್ಮ ದಂಗಲ್‌ ಯಶಸ್ವಿಯಾಗಿಲ್ಲ. ಜಿಲ್ಲೆಯ ಹಲವೆಡೆ ನಡೆಯೋ ಜಾತ್ರೆಗಳನ್ನ ಹಿಂದೂ ಮುಸ್ಲಿಂರೇ ಸೇರಿ ಆಚರಣೆ ಮಾಡ್ತಾರೆ. ಮುಸ್ಲಿಂ ಹಬ್ಬಗಳನ್ನ ಹಿಂದೂಗಳು ಆಚರಿಸೋದುಂಟು. ಹೀಗಾಗಿ ಕಳೆದ ಯುಗಾದಿಯ ಕತ್ನಳ್ಳಿ ಬಬಲಾದಿ ಸದಾಶಿವ ಅಜ್ಜನ ಜಾತ್ರೆಯಲ್ಲಿ ಧರ್ಮ ದಂಗಲ್‌ ಗೆ ಜನರು ಸೊಪ್ಪು ಹಾಕಲಿಲ್ಲ. ಈ ಬಾರಿ ನಡೆಯಲಿರುವ ಸಂಕ್ರಾಂತಿ ಜಾತ್ರೆಯಲ್ಲಿ ಧರ್ಮ ದಂಗಲ್‌ ಕಥೆ ಏನು ಅನ್ನೋದನ್ನ ಹಿಂದೂ ಪರ ಸಂಘಟನೆಗಳು ನಿರ್ಧರಿಸಲಿವೆ.

Latest Videos
Follow Us:
Download App:
  • android
  • ios