Asianet Suvarna News Asianet Suvarna News

ರಸ್ತೆ ಗುಂಡಿಗೆ ಯುವತಿ ಬಲಿ, ಸುವರ್ಣ ನ್ಯೂಸ್ ವರದಿ ಬಳಿಕ FIR ದಾಖಲು

Oct 9, 2021, 12:32 PM IST

ಬೆಂಗಳೂರು (ಅ. 9): ರಸ್ತೆಗುಂಡಿಯಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಮಾಗಡಿ ರಸ್ತೆಯಲ್ಲಿ ಗುಂಡಿಯಿಂದ ಉಂಟಾದ ಅಪಘಾತದಲ್ಲಿ 17 ವರ್ಷದ ಯುವತಿಯೊಬ್ಬಳು ಶುಕ್ರವಾರ ಬಲಿಯಾಗಿದ್ದಾಳೆ. 

ಬೊಮ್ಮಾಯಿ- ನಡ್ಡಾ ಭೇಟಿ: ಸಂಪುಟ ವಿಸ್ತರಣೆ ಸುಳಿವು..?

ಗೋರಿಪಾಳ್ಯದ ನಿವಾಸಿ ನುಬಿಯಾ (17) ಮೃತ ದುರ್ದೈವಿ. ಈ ಘಟನೆಯಲ್ಲಿ ಆಕೆಯ ಸೋದರ ಹ್ರಾನ್‌ ಹಾಗೂ ಸೋದರಿ ಅಫ್ರಿನ್‌ ಗಾಯಗೊಂಡಿದ್ದು, ಅವರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ತಾವರೆಕೆರೆಯಿಂದ ಸೋದರನ ಜತೆ ನುಬಿಯಾ ಸ್ಕೂಟರ್‌ನಲ್ಲಿ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಕಾಚೋಹಳ್ಳಿ ಕ್ರಾಸ್‌ ಬಳಿ ಈ ಘಟನೆ ನಡೆದಿದೆ. ಸುವರ್ಣ ನ್ಯೂಸ್ ವರದಿ ಬಳಿ ಎಫ್‌ಐಆರ್ ದಾಖಲಾಗಿದೆ. 

Video Top Stories