Asianet Suvarna News Asianet Suvarna News

Mandya: 30 ವರ್ಷಗಳ ಪ್ರೀತಿ, 65 ರ ಇಳಿವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

Dec 3, 2021, 9:35 AM IST
  • facebook-logo
  • twitter-logo
  • whatsapp-logo

ಮಂಡ್ಯ (ಡಿ. 03): ಅವರಿಬ್ಬರದ್ದೂ ಬರೋಬ್ಬರಿ 30 ವರ್ಷಗಳ ಲವ್‌ ಕಹಾನಿ. (Love Story) 30 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಕೊನೆಗೂ 65 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಇಂತದ್ದೊಂದು ಅಪರೂಪದ ಮದುವೆಗೆ ಸಾಕ್ಷಿಯಾಗಿದೆ ಮಂಡ್ಯದ (Mandya) ಮೇಲುಕೋಟೆ. 

karnataka Omicron Case: ವಿದೇಶಕ್ಕೆ ಹೋಗಿಲ್ಲ, ಯಾರ ಸಂಪರ್ಕವೂ ಇಲ್ಲ, ಆದರೂ ಒಮಿಕ್ರಾನ್ ಪತ್ತೆ!

ಮೈಸೂರು ಜಿಲ್ಲೆ ಹೆಬ್ಬಾಳದ ಚಿಕ್ಕಣ್ಣ, ಜಯಮ್ಮ ಕಳೆದ 30 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೌಟುಂಬಿಕ ಕಾರಣದಿಂದ ವಿವಾಹ ಬಂಧ ಏರ್ಪಟ್ಟಿರಲಿಲ್ಲ. 65 ನೇ ಇಳಿ ವಯಸ್ಸಿನಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧುವರರ ಆಪ್ತರು, ಸ್ನೇಹಿತರು, ಹಿತೈಶಿಗಳು ದಂಪತಿಗಳನ್ನು ಹರಸಿದರು. 

Video Top Stories