Asianet Suvarna News Asianet Suvarna News

ಲಕ್ಕಸಂದ್ರ ಕಟ್ಟಡ ಕುಸಿತ: ಮಾಲೀಕ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲು

Sep 28, 2021, 9:35 AM IST

ಬೆಂಗಳೂರು (ಸೆ. 28): ರಾಜಧಾನಿಯಲ್ಲಿ ಮೂರು ಅಂತಸ್ತಿನ ಸುಮಾರು 60 ವರ್ಷಕ್ಕೂ ಹಳೆಯದಾದ ಶಿಥಿಲವಾಗಿದ್ದ ಕಟ್ಟಡವೊಂದು ಸೋಮವಾರ ಸಿನಿಮೀಯ ರೀತಿಯಲ್ಲಿ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಮೂರಂತಸ್ತಿನ ಕಟ್ಟಡ ಕುಸಿತ.. ಗೊತ್ತಿದ್ದೂ ಅಪಾಯ ಎಳೆದುಕೊಂಡ ದುರಂತ!

ಕಟ್ಟಡದಲ್ಲಿ ಮೆಟ್ರೋ ರೈಲು ಮಾರ್ಗದ ಕಾಮಗಾರಿಗಾಗಿ ಬಂದಿದ್ದ ಸುಮಾರು 40 ಮಂದಿ ಗುತ್ತಿಗೆ ಕಾರ್ಮಿಕರು ವಾಸವಾಗಿದ್ದರು. ಬೆಳಗ್ಗೆ ಎಲ್ಲರೂ ಕೆಲಸಕ್ಕೆ ಹೋಗಿದ್ದು, ಮೂರ್ನಾಲ್ಕು ಮಂದಿ ಮಾತ್ರ ಕಟ್ಟಡದಲ್ಲಿದ್ದರು. ಕಟ್ಟಡ ಕುಸಿಯುವ ಮುನ್ಸೂಚನೆ ಸಿಕ್ಕಿದ ತಕ್ಷಣ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮನೆಯಿಂದ ಹೊರಗೆ ಕಳುಹಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಲಿಕ ಸುರೇಶ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.