Asianet Suvarna News Asianet Suvarna News

ಮೂರಂತಸ್ತಿನ ಕಟ್ಟಡ ಕುಸಿತ.. ಗೊತ್ತಿದ್ದು ಅಪಾಯ ಎಳೆದುಕೊಂಡ ದುರಂತ!

Sep 27, 2021, 6:53 PM IST

ಬೆಂಗಳೂರು(ಸೆ. 27)  ಬೆಂಗಳೂರಿನ(Bengaluru) ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಳೆಯ ಕಟ್ಟಡ ಇದು ಎಂದು ಗೊತ್ತಿದ್ದರೂ ತೆರವು ಕೆಲಸ ಮಾತ್ರ ಮಾಡಿರಲಿಲ್ಲ.

ನೋಡ ನೋಡುತ್ತಿದ್ದಂತೆ ಕುಸಿದ ಕಟ್ಟಡ

ಎರಡು ವರ್ಷದಿಂದಲೇ ಕಟ್ಟಡ ವಾಲಿಕೊಂಡಿತ್ತು.  ಬಾಡಿಗೆ ಆಸೆಗೆ ಬಿದ್ದು ಮಾಲೀಕ ಬಾಡಿಗೆ ಕೊಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ BBMP ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.