ಚಾಮರಾಜನಗರದಲ್ಲಿ 24 ಸಾವುಗಳು ಆಕ್ಸಿಜನ್ ಕೊರತೆಯಿಂದಲ್ಲ: ಸುರೇಶ್ ಕುಮಾರ್

ಚಾಮರಾಜನಗರದಲ್ಲಿ ಅಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

First Published May 3, 2021, 3:30 PM IST | Last Updated May 3, 2021, 3:37 PM IST

ಬೆಂಗಳೂರು (ಮೇ. 03): ಚಾಮರಾಜನಗರದಲ್ಲಿ ಅಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿ: ಸರ್ಕಾರ ಏನ್ರಿ ಮಾಡ್ತಿದೆ? ಎಚ್‌ಡಿಕೆ ತರಾಟೆ

'ಈ ದುರಂತ ನಮಗೂ ಬಹಳ ದುಃಖ ತಂದಿದೆ. ಕುಟುಂಬಸ್ಥರ ನೋವು ನಮಗೂ ಅರ್ಥ ಆಗುತ್ತದೆ. 24 ಸಾವುಗಳು ಆಮ್ಲಜನಕ ಕೊರತೆಯಿಂದ ಆಗಿದ್ದಲ್ಲ. ಮೃತರು ಯಾವ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು..? ಅವರ ಸಮಸ್ಯೆ ಏನಾಗಿತ್ತು..? ಎಂದು ವರದಿ ಕೇಳಿದ್ದೇವೆ. ಈಗಿರುವ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ 12.30 - 2 ಗಂಟೆಯವರೆಗೆ ಅಕ್ಸಿಜನ್ ಕೊರತೆಯಾಗಿದೆ. ಕೂಡಲೇ ನಾವು ಆಕ್ಸಿಜನ್‌ಗೆ ವ್ಯವಸ್ಥೆ ಮಾಡಿದೆವು. ಮೈಸೂರಿಂದ ಬರುವಾಗ ವಿಳಂಬವಾಯಿತು' ಎಂದು ಸ್ಪಷ್ಟನೆ ನೀಡಿದ್ದಾರೆ. 

Video Top Stories