
ಅಧಿಕಾರಿಗಳ ಮುಂದೆ ಆರ್ಯನ ಸ್ಫೋಟಕ ಮಾಹಿತಿ, ಬೆಂಗಳೂರಿಗರ ಮೇಲೆ NCB ಕಣ್ಣು
ರೇವ್ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾಲಯವು ಎನ್ಸಿಬಿ ವಶಕ್ಕೆ ಒಪ್ಪಿಸಿದೆ.
ಬೆಂಗಳೂರು (ಅ. 05): ರೇವ್ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾಲಯವು ಎನ್ಸಿಬಿ ವಶಕ್ಕೆ ಒಪ್ಪಿಸಿದೆ.
ಮುಂಬೈ ಡ್ರಗ್ ಕೇಸ್‌ಗೆ ಬೆಂಗಳೂರು ಲಿಂಕ್: 200 ಕ್ಕೂ ಹೆಚ್ಚು ಮಂದಿಗೆ ಟೆನ್ಷನ್ ಶುರು
ಆರ್ಯನ್ ಕೊಟ್ಟ ಮಾಹಿತಿ ಮೇರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಈ 11 ಮಂದಿಯಲ್ಲಿ ಬೆಂಗಳೂರಿನವರೂ ಇರುವ ಶಂಕೆಯಿದೆ. ಮುಂಬೈ ಡ್ರಗ್ಸ್ ಪಾರ್ಟಿಗೂ, ಬೆಂಗಳೂರಿಗೂ ಇರುವ ನಂಟಿನ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಪ್ರತಿಕ್ರಿಯಿಸಿದ್ದಾರೆ.