PSI Recruitment Scam ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!

ಕಲಬುರಗಿಯ ಇನ್ನೊಂದು ಪ್ರತಿಷ್ಠಿತ ಎಂ.ಎಸ್.ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದಿದೆ. ಈ ಬಗ್ಗೆ ನಡೆಯುತ್ತಿರುವ ಸಿಐಡಿ  ಇಬ್ಬರನ್ನು ಬಂಧಿಸಿದ್ದಾರೆ. 

Share this Video
  • FB
  • Linkdin
  • Whatsapp

ಕಲಬುರಗಿ(ಮೇ.3): ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ (CID) ಬಗೆದಷ್ಟು ಹೊಸ ಹೊಸ ಹಗರಣಗಳು ಹೊರಬರುತ್ತಲೇ ಇವೆ. ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಸಿಐಡಿ ತನಿಖೆ ವೇಳೆ ಅನಾವರಣಗೊಂಡಿದೆ. ಇದರಿಂದಾಗಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಂತಾಗಿದೆ. 

SAI RECRUITMENT 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಲಬುರಗಿ (Kalaburagi) ಜಿಲ್ಲೆಯೊಂದರಲ್ಲಿ ನಿನ್ನೆವರೆಗೆ 26 ಜನ ಸಿಕ್ಕು ಬಿದ್ದಿದ್ದು ಸಿಐಡಿಯಿಂದ ಬಂಧನಕ್ಕೆ ಒಳಗಾಗಿದ್ದಾರೆ. ಎಲ್ಲಾ ಇಪ್ಪತ್ತಾರು ಜನ ಆರೋಪಿಗಳು (Accused) ಬಂಧಿತರಾಗಿರುವುದು (Arrest) ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಪಾಲುದಾರಿಕೆಯ ಕಾರಣಕ್ಕಾಗಿ.‌ ಇದೀಗ ಕಲಬುರಗಿಯ ಇನ್ನೊಂದು ಪ್ರತಿಷ್ಠಿತ ಎಂ.ಎಸ್.ಐ ಕಾಲೇಜು ಪರೀಕ್ಷಾ (MSI college center) ಕೇಂದ್ರದಲ್ಲೂ ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದಿದೆ. ಈ ಬಗ್ಗೆ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ (Investigation) ಈ ಮಹತ್ವದ ಮಾಹಿತಿ ಬಯಲಾಗಿದೆ. ಈ ಸುಳಿವು ಸಿಕ್ಕಿದ್ದೇ ತಡ ಸಿಐಡಿ ಆ ಬಗೆಗಿನ ತನಿಖೆ ತೀವ್ರಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ. 

Related Video