PSI Recruitment Scam ನಾಪತ್ತೆಯಾಗಿರುವ ಕಿಂಗ್‌ಪಿನ್ ಗಳ ಪತ್ತೆಗೆ CID ವಿಫಲ?

ಪಿಎಸ್‌ಐ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ ಈ ವರೆಗೆ 8 ಮಂದಿಯನ್ನೇ ಅಷ್ಟೇ ಬಂಧಿಸಿದ್ದು, ತನಿಖೆ ಮುಂದೆ ಸಾಗುತ್ತಿಲ್ಲ.

First Published Apr 21, 2022, 11:24 AM IST | Last Updated Apr 21, 2022, 11:24 AM IST

ಕಲಬುರಗಿ(ಏ.21): ಕಳೆದ ವರ್ಷ ಅಕ್ಟೋಬರ್ 3 ರಂದು ಕಲಬುರಗಿಯ (Kalaburagi)  ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (Crime Investigation Department-CID) ತನಿಖೆಯನ್ನು ಚುರುಕುಗೊಳಿಸಿದೆ. ಆದರೆ ಪ್ರಗತಿ ಕಾಣುತ್ತಿಲ್ಲ. ಈ ವರೆಗೆ 8 ಮಂದಿಯನ್ನೇ ಅಷ್ಟೇ ಬಂಧಿಸಲಾಗಿದ್ದು, ತನಿಖೆ ಮುಂದೆ ಸಾಗುತ್ತಿಲ್ಲ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC Nagesh

ವಾರ ಕಳೆದರೂ ಪ್ರಕರಣದ ಕಿಂಗ್ ಪಿನ್ ಗಳಾಗಿರುವ ಬಿಜೆಪಿ ನಾಯಕಿ ದಿವ್ಯ ಹಾಗರಗಿ (divya hagargi), ಮುಖ್ಯೋಪಾಧ್ಯಾಯ ಕಾಶೀನಾಥ್, ಕಲಬುರಗಿಯ ನೀರಾವರಿ ಇಂಜಿನಿಯರ್ ಮಂಜುನಾಥ್ ನಾಪತ್ತೆಯಾಗಿದ್ದಾರೆ. ಮಾತ್ರವಲ್ಲ ಅಜ್ಞಾತ ಸ್ಥಳದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳಿಗೆ ಪ್ರಭಾವಿಗಳ ಕೃಪಾಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ. ಈ ಅಕ್ರಮದ ಬಗ್ಗೆ ಕನ್ನಡಪ್ರಭ-ಸುವರ್ಣನ್ಯೂಸ್ ಸುದೀರ್ಘ ವರದಿ ಬಿತ್ತರಿಸಿತ್ತು.