ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC Nagesh

ಪಂಚತಂತ್ರ, ರಾಮಾಯಣ , ಮಹಾಭಾರತ, ಭಗವದ್ಗೀತೆ, ಕುರಾನ್  ಮತ್ತು ಇತರ ನೈತಿಕ ಶಿಕ್ಷಣಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

Ramayana Mahabharata Quran and others will be part of moral education says BC Nagesh gow

ಬೆಂಗಳೂರು (ಏ.20): ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು (Moral science ) ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು (moral studies) ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಹೇಳಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚತಂತ್ರ (Panchatantra), ರಾಮಾಯಣ (Ramayana), ಮಹಾಭಾರತ (Mahabharata), ಭಗವದ್ಗೀತೆ (Bhagavat Gita), ಕುರಾನ್ (Quran) ಮತ್ತು ಇತರ ನೈತಿಕ ಶಿಕ್ಷಣಗಳನ್ನು ಕೂಡ ಸೇರಿಸಲಾಗುವುದು. ಸಮಿತಿಯೊಂದು ಪಠ್ಯಕ್ರಮವನ್ನು ನಿರ್ಧರಿಸಲಿದ್ದು ಈ ನೈತಿಕ ಶಿಕ್ಷಣದ ಪಠ್ಯಕ್ಕೆ ಪರೀಕ್ಷೆಯಿರುವುದಿಲ್ಲ ಎಂದು ವಿವರಿಸಿದರು.

 

ಮದ್ರಸಗಳಿಂದ (madrasas ) ಅಥವಾ ಅಲ್ಪಸಂಖ್ಯಾತ ಸಮುದಾಯ (minority community) ಮುಖಂಡರಿಂದ ನಮಗೆ ಬೇಡಿಕೆ ಬರದಿದ್ದರೂ ಕೂಡ ನಿಗದಿತ ಶಿಕ್ಷಣ ಮಕ್ಕಳಿಗೆ ಕೊಡಿಸಿ ಎಂದು ಪೋಷಕರಿಂದ ಬೇಡಿಕೆ ಬಂದಿದೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯ ಮಕ್ಕಳು ಕೂಡ ಬೇರೆ ಮಕ್ಕಳಂತೆ ಶಾಲೆಗಳಲ್ಲಿ ಪಡೆಯುವ ನಿಗದಿತ ಶಿಕ್ಷಣವನ್ನು ಗಳಿಸಿ ಪೈಪೋಟಿ ಒಡ್ಡಲು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಸಲು ಸಹಾಯವಾಗುತ್ತದೆ ಎಂದರು.

ಪ.ಬಂಗಾಳದ ಬಳಿಕ ಈಗ ಜಾರ್ಖಂಡ್‌ನಲ್ಲಿ STUDENT CREDIT CARD ಯೋಜನೆ!

ಕೋವಿಡ್ (Covid-19) ಸಾಂಕ್ರಾಮಿಕ ಸಮಯದಲ್ಲಿ ಕುಸಿದು ಹೋಗಿದ್ದ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಪೂರ್ವಸಿದ್ಧತಾ ತರಗತಿಗಳು, ಕಲಿಕಾ ಚೆತಾರಿಕೆ ವಿದ್ಯಾರ್ಥಿಗಳಿಗೆ ಹಾಡು ಮತ್ತು ನೃತ್ಯದ ಮೂಲಕ ಕಲಿಸುವತ್ತ ಗಮನ ಹರಿಸಲಾಗುತ್ತಿದ್ದು, ಅದು ಮೇ 16 ರಂದು ಪ್ರಾರಂಭವಾಗಲಿದೆ. ಜೂನ್ 1 ರಂದು ನಿಯಮಿತ ತರಗತಿಗಳು ಪ್ರಾರಂಭವಾಗುತ್ತವೆ. ಎನ್‌ಇಪಿ ಪ್ರಕಾರ ವಿದ್ಯಾರ್ಥಿಗಳಿಗೆ ಕಡಿಮೆ ಹೋಮ್‌ವರ್ಕ್ ಇರುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಗ್ರಾಮ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅನೇಕ ಶಾಲೆಗಳನ್ನು ವಿಲೀನಗೊಳಿಸಿ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದರು.

ರಾಜ್ಯದಲ್ಲಿ ಇಂತಹ 2,300 ಶಾಲೆಗಳಿದ್ದು, ಅವುಗಳಲ್ಲಿ ಕೆಲವು ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಕುರಿತು ಹೈಕೋರ್ಟ್ ಸರ್ಕಾರಕ್ಕೆ ಕನಿಷ್ಠ ಎರಡು ಸೆಟ್ ನೀಡುವಂತೆ ಸೂಚಿಸಿದೆ ಎಂದರು. ಟೆಂಡರ್ ಕರೆದ ನಂತರ ಸಮವಸ್ತ್ರದ ಬೆಲೆಯನ್ನು 182 ರೂಪಾಯಿಗೆ  ಇಳಿಸಲಾಗಿದೆ ಎಂದು ಸಚಿವರು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆ, ಹಿಜಾಬ್ ಅವಕಾಶವಿಲ್ಲ, ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ 

ಈ ಹಿಂದೆ ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವ ಕುರಿತು ಪ್ರಶ್ನಿಸಿದಾಗ, ಧರ್ಮಗ್ರಂಥವು ನೈತಿಕ ಮೌಲ್ಯಗಳನ್ನು ನೀಡುತ್ತದೆ ಎಂದು ಪ್ರತಿಪಾದಿಸಿದ ಸಿಎಂ ಬೊಮ್ಮಾಯಿ (CM Basavaraj Bommai), ಶಾಲಾ ಶೈಕ್ಷಣಿಕ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಬಗ್ಗೆ ಚರ್ಚೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. 

2022-23ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಬಿಜೆಪಿ (BJP) ಆಡಳಿತವಿರುವ ಗುಜರಾತ್ ಗುರುವಾರ ಪ್ರಕಟಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೋರ್ಟ್‌ ಪರಿಣತರಂತೆ ವರ್ತಿಸಬಾರದು: ಸುಪ್ರೀಂ ಕೋರ್ಟ್

"ಗುಜರಾತ್‌ನಲ್ಲಿ ಇದನ್ನು ಮಾಡಲಾಗಿದೆ, ನಮ್ಮ ಸಚಿವರು ಚರ್ಚಿಸುವುದಾಗಿ ಹೇಳಿದ್ದಾರೆ. ಶಿಕ್ಷಣ ಇಲಾಖೆಯು ಯಾವ ವಿವರಗಳೊಂದಿಗೆ ಹೊರಬರುತ್ತದೆ ಎಂಬುದನ್ನು ನೋಡೋಣ" ಎಂದು ಬೊಮ್ಮಾಯಿ ಅವರು ಶಾಲಾ ಶಿಕ್ಷಣದಲ್ಲಿ ಧರ್ಮಗ್ರಂಥವನ್ನು ಪರಿಚಯಿಸುವ ಬಗ್ಗೆ ಸರ್ಕಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.

Latest Videos
Follow Us:
Download App:
  • android
  • ios