'ಅನುಷ್ಕಾ ಸರ್' ಎಂದ ಫೋಟೋಗ್ರಾಫರ್, ಕೊಹ್ಲಿ ರಿಯಾಕ್ಟ್ ಮಾಡಿದ್ದು ಹೇಗೆ ನೋಡಿ...

ಫೋಟೋಗ್ರಾಫರ್ಸ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ 'ಅನುಷ್ಕಾ ಸರ್' ಎಂದಿದ್ದಾನೆ.  ಮೌನವಾಗಿಯೇ ಫೋಸ್ ನೀಡುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಕರೆಗೆ ವಿಶೇಷವಾಗಿ ರೆಸ್ಪಾಂಡ್ ಮಾಡಿ, ಜೋರಾಗಿ ನಗುವ ಮುನ್ನ ಹೇಳಿದ್ದೇನು? ವೀಡಿಯೋ ನೋಡಿ.

Share this Video
  • FB
  • Linkdin
  • Whatsapp

ಸೆಲೆಬ್ರಿಟಿಗಳ ಫೋಟೋ ತೆಗೆಯಲು ಪಾಪರಾಜಿಗಳು ಹಿಂದೆ ಬೀಳುವುದು ಕಾಮನ್. ಒಳ್ಳೇ ಫೋಸ್ ಸಿಗಬೇಕು ಅಂತ ತಮ್ಮದೇ ಶೈಲಿಯಲ್ಲಿ ಫೋಟೋಗ್ರಾಫರ್ಸ್ ಎಲ್ಲರನ್ನೂ ಕರೆಯುತ್ತಲೇ ಇರುತ್ತಾರೆ. ಹಾಗೆ ಕರೆಯುವಾಗ ಒಬ್ಬ ಫೋಟೋಗ್ರಾಫರ್‌ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ 'ಅನುಷ್ಕಾ ಸರ್' ಎಂದಿದ್ದಾನೆ. ಅಲ್ಲೀವರೆಗೂ ಮೌನವಾಗಿಯೇ ಫೋಸ್ ನೀಡುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಕರೆಗೆ ವಿಶೇಷವಾಗಿ ರೆಸ್ಪಾಂಡ್ ಮಾಡಿ ನನ್ನನ್ನು 'ವಿರಾಟ್‌ ಮ್ಯಾಮ್‌' ಎಂದು ಕರೆಯಿರಿ ಎಂದು ಫೋಟೊಗ್ರಾಫರ್‌ನ ಕಾಲೆಳೆದು ಜೋರಾಗಿ ನಕ್ಕಿದ್ದಾರೆ. ರೆಸ್ಟೋರೆಂಟ್‌ವೊಂದಕ್ಕೆ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರಿಗೆ ಪೋಟೊಗ್ರಾಫರ್‌ ಒತ್ತಾಯಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿರಾಟ್‌ ಅಭಿಮಾನಿಗಳು ಫಿದಾ ಆಗಿದ್ದಾರೆ.

Add Asianetnews Kannada as a Preferred SourcegooglePreferred

Related Video