Asianet Suvarna News Asianet Suvarna News

Ultimate Kho Kho 2 ಸೋಲಿನ ಬಳಿ ಗೆಲುವಿನ ಹಳಿಗೆ ಮರಳಿದ ಚೆನ್ನೈ ಕ್ವಿಕ್‌ ಗನ್ಸ್‌..!

ರಾಜಸ್ಥಾನ ವಾರಿಯರ್ಸ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಕ್ವಿಕ್‌ ಗನ್ಸ್‌
ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈಗೆ ಗೆಲುವಿನ ಸಿಂಚನ
ರಾಜಸ್ಥಾನ ಎದುರು 21 ಅಂಕಗಳ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ 
ಚೆನ್ನೈ ಪರ 18 ಅಂಕ ಗಳಿಸಿ ಮಿಂಚಿದ ರಾಮ್ಜಿ ಕಶ್ಯಪ್‌
 

First Published Aug 28, 2022, 2:56 PM IST | Last Updated Aug 28, 2022, 2:56 PM IST

ಪುಣೆ(ಆ.28): ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಕಿಂಗ್ಸ್‌ ತಂಡವು ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ವಾರಿಯರ್ಸ್‌ ಎದುರು ಅದ್ಭುತ ಪ್ರದರ್ಶನ ತೋರಿದ ಚೆನ್ನೈ ಕ್ವಿಕ್ ಗನ್ಸ್‌ ತಂಡವು 21 ಅಂಕಗಳ ಭರ್ಜರಿ ಗೆಲುವು ಸಾಧಿಸಿದೆ.

ಚೆನ್ನೈ ಕ್ವಿಕ್ ಗನ್ಸ್‌ ತಂಡದ ಪರ ರಾಮ್ಜಿ ಕಶ್ಯಪ್‌ 18 ಅಂಕಗಳನ್ನು ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ರಾಜಸ್ಥಾನ ವಾರಿಯರ್ಸ್‌ ಹಾಗೂ ಚೆನ್ನೈ ಕ್ವಿಕ್ ಗನ್ಸ್‌ ತಂಡದ ನಡುವಿನ ಪಂದ್ಯದ ಹೈಲೈಟ್ಸ್‌ ಹೀಗಿದೆ ನೋಡಿ..
 

Video Top Stories