Asianet Suvarna News Asianet Suvarna News

ಲೈಫಲ್ಲಿ ಶಾರ್ಟ್‌ಕಟ್‌ ಇಲ್ಲ, ಪರಿಶ್ರಮನೇ ಮುಖ್ಯ: ನಿರಂಜನ್ ಮುಕುಂದನ್

ಪಾರಾಲಿಂಪಿಯನ್ ನಿರಂಜನ್‌ಗೆ ಈವರೆಗೂ 19 ಆಪರೇಷನ್ ಗಳು ನಡೆದಿವೆ. ಮನೆಯ ಅಂಗಳದಲ್ಲಿ ಅಡ್ಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಈಗ ಉತ್ತಮ ಈಜುಪಟು. ಸ್ವಿಮ್ಮಿಂಗ್ ಪೂಲ್ ನಲ್ಲಿ ಮೀನಿನಷ್ಟೇ ವೇಗವಾಗಿ ಈಜುತ್ತಾರೆ, ಹಲವು ವಿಶ್ವದಾಖಲೆ ಮಾಡಿದ್ದಾರೆ .ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ 85 ಪದಕಗಳನ್ನು ಗೆದ್ದಿದ್ದಾರೆ. ನಿರಂಜನ್ ಅವರ ಸಂದರ್ಶನ ಇಲ್ಲಿದೆ ನೋಡಿ

ಬೆಂಗಳೂರು(ಜು.22): ಈತ ನಿರಂಜನ್ ಮುಕುಂದನ್. ಈ 28 ವರ್ಷದ  ಯುವಕನಿಗೆ ಅಪರೂಪದ ಅಂಗವೈಕಲ್ಯ ಸಮಸ್ಯೆಯಿದೆ. ಇದು Spina Bifida ಎಂಬ ಸಮಸ್ಯೆ ಇದೆ. ಸಾವಿರದಲ್ಲಿ ಒಬ್ಬರಿಗೆ  ಸೀಳು ಬೆನ್ನುಹುರಿಯಲ್ಲಿ ಕಾಣಿಸಿಕೊಳ್ಳುವ ಒಂದು ವಿಧದ ಅಂಗವೈಕಲ್ಯವಂತೆ. ಬೆನ್ನುಹುರಿಯಿಂದ ಹೊರಬರುವ ನರಗಳು ಬದಿಗೆ ತಗುಲಿಕೊಂಡಿರುತ್ತವೆ. ಈ ನರಗಳು ಎಳೆಯುವುದರಿಂದ ಕಾಲುಗಳು ನೇರವಾಗಿರುವುದಿಲ್ಲ. ಹಾಗಾಗಿ ಕಾಲುಗಳನ್ನು ನೇರವಾಗಿ ಚಾಚಲು, ಮಡಚಲು ಆಗುವುದಿಲ್ಲ. ಸರಭರನೆ ನಡೆಯಲು, ಓಡಲು ಆಗುವುದಿಲ್ಲ. 

ಹಾಗೆಯೇ ನಿರಂಜನ್‌ಗೆ ಈವರೆಗೂ 19 ಆಪರೇಷನ್ ಗಳು ನಡೆದಿವೆ. ಮನೆಯ ಅಂಗಳದಲ್ಲಿ ಅಡ್ಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಈಗ ಉತ್ತಮ ಈಜುಪಟು. ಸ್ವಿಮ್ಮಿಂಗ್ ಪೂಲ್ ನಲ್ಲಿ ಮೀನಿನಷ್ಟೇ ವೇಗವಾಗಿ ಈಜುತ್ತಾರೆ, ಹಲವು ವಿಶ್ವದಾಖಲೆ ಮಾಡಿದ್ದಾರೆ .ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ 85 ಪದಕಗಳನ್ನು ಗೆದ್ದಿದ್ದಾರೆ. ನಿರಂಜನ್ ಅವರ ಸಂದರ್ಶನ ಇಲ್ಲಿದೆ ನೋಡಿ..

ನಿರಂಜನ್ ಮುಕುಂದನ್: 19 ಆಪರೇಷನ್, 85 ಪದಕ..! ಇದು ಹೆಮ್ಮೆಯ ಕನ್ನಡಿಗನ ಸಾಹಸಗಾಥೆ