ನಿರಂಜನ್ ಮುಕುಂದನ್: 19 ಆಪರೇಷನ್, 85 ಪದಕ..! ಇದು ಹೆಮ್ಮೆಯ ಕನ್ನಡಿಗನ ಸಾಹಸಗಾಥೆ
ಚುರಕಾಗಿ ಓಡಾಡಲು ಸಾಧ್ಯವಾಗದ ನಿರಂಜನ್‌ಗೆ ಇದುವರೆಗೂ 19 ಶಸ್ತ್ರಚಿಕಿತ್ಸೆಗಳಾಗಿವೆ. ಮನೆಯ ಅಂಗಳದಲ್ಲೇ ಸರಿಯಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ನಿರಂಜನ್, ಇದೀಗ ರಾಜ್ಯ ಕಂಡ ಅತ್ಯುತ್ತಮ ಪ್ಯಾರಾ ಸ್ವಿಮ್ಮಿಂಗ್ ಪಟು ಎನಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮೀನಿನಷ್ಟೇ ವೇಗವಾಗಿ ಈಜುವ ಕ್ಷಮತೆ ಹೊಂದಿರುವ ನಿರಂಜನ್ 85 ಪದಕಗಳಿಗೆ ಕೊರಳೊಡ್ಡಿದ್ದಾರೆ. ನಿರಂಜನ್ ಮುಕುಂದನ್ ಅವರ ಬದುಕು-ಬವಣೆ ಹಾಗೂ ಸಾಧನೆಯ ಒಂದು ಝಲಕ್ ಇಲ್ಲಿದೆ ನೋಡಿ..
ಬೆಂಗಳೂರು(ಜು.22): ನಿರಂಜನ್ ಮುಕುಂದನ್ ಅಪ್ಪಟ ಕನ್ನಡದ ಈಜು ಪ್ರತಿಭೆ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. 28 ವರ್ಷದ ಇವರು ಸಾವಿರದಲ್ಲೊಬ್ಬರಿಗೆ ಕಾಣಿಸಿಕೊಳ್ಳುವ ಸ್ಪೈನಾ ಬೈಫಿಡಾ ಎನ್ನುವ ಸಮಸ್ಯೆಯಿದೆ. ತಮಗಿದ್ದ ಸಮಸ್ಯೆಯನ್ನು ಮೆಟ್ಟಿನಿಂತು ಹಲವರ ಪಾಲಿಗೆ ಸ್ಪೂರ್ತಿಯಾಗಿದ್ದಾರೆ ನಿರಂಜನ್ ಮುಕುಂದನ್.