ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?

ರಾಜ್ಯದ ಅಥ್ಲೀಟ್ ಬಿಂದು ರಾಣಿ ಮೇಲೆ ಸೀನಿಯರ್ ಕೋಚ್ ಪತ್ನಿಯಿಂದ ಹಲ್ಲೆಗೆ ಯತ್ನ
ಸುಳ್ಳು ಹೇಳಿ ಟೆಡ್ ಎಕ್ಸ್ ಕಾರ್ಯಕ್ರಮದಲ್ಲಿ ಬಿಂದು ರಾಣಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ದೌರ್ಜನ್ಯ
ಈ ಘಟನೆಯ ಕುರಿತಂತೆ ಎಕ್ಸ್‌ಕ್ಲೂಸಿವ್ ಆಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಸೀನಿಯರ್ ಕೋಚ್ ಯತೀಶ್

Share this Video
  • FB
  • Linkdin
  • Whatsapp

ಬೆಂಗಳೂರು(ಜು.03): ಪ್ರಖ್ಯಾತ ಟಿವಿ ಶೋ ಎನಿಸಿಕೊಂಡಿರುವ ಟೆಡ್ ಎಕ್ಸ್‌ ಶೋನಲ್ಲಿ ಪಾಲ್ಗೊಳ್ಳಲು ಬಿಂದು ರಾಣಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಕಂಠೀರವ ಸ್ಟೇಡಿಯಂನ ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ, ಏಷ್ಯಾಡ್‌ ಅಥ್ಲೀಟ್‌ ಬಿಂದು ರಾಣಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಮುಂಜಾನೆ ಕಂಠೀರವ ಸ್ಟೇಡಿಯಂನಲ್ಲಿ ಬಿಂದು ರಾಣಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ, ಏಕವಚನದಲ್ಲೇ ಬಿಂದು ರಾಣಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಷ್ಟೇ ಅಲ್ಲದೇ ಚಪ್ಪಲಿ ತೋರಿಸಿ ಬಿಂದು ರಾಣಿಯನ್ನು ತಳ್ಳಾಡಿದ್ದಾರೆ.

ರಾಜ್ಯದ ಅಥ್ಲೀಟ್‌ ಬಿಂದು ರಾಣಿ ಮೇಲೆ ಕೋಚ್‌ ಪತ್ನಿ ದೌರ್ಜನ್ಯ..!

ಈ ಎಲ್ಲಾ ಘಟನೆಗಳ ಕುರಿತಂತೆ ಸೀನಿಯರ್ ಅಥ್ಲೆಟಿಕ್ಸ್ ಕೋಚ್ ಯತೀಶ್‌ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದು, ಈ ಘಟನೆಯ ಹಿನ್ನೆಲೆ ಹಾಗೂ ಘಟನೆಯ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ಯತೀಶ್ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Related Video