ಹೀಯಾಳಿಸುತ್ತಿದ್ದವರಿಂದಲೇ ಹೊಗಳಿಕೆ: ನಿರಂಜನ್ ಮುಕುಂದನ್ ಬಿಚ್ಚಿಟ್ಟ ಸವಾಲುಗಳು
ನಿರಂಜನ್ ಮುಕುಂದನ್ ಅವರಿಗೆ 2015 ರಲ್ಲಿ ಭಾರತ ಸರ್ಕಾರವು ವರ್ಷದ ಶ್ರೇಷ್ಠ ಕ್ರೀಡಾಪಟು ಎಂದು ಗೌರವಿಸಿದೆ. 2016 ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ, ಚೇಂಜ್ ಮೇಕರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿದೆ, ರೋಲ್ ಮಾಡೆಲ್ ಫಾರ್ ಯೂತ್ ಪ್ರಶಸ್ತಿಗಳು ದೊರಕಿವೆ. ಈಜಿನಲ್ಲಿ ಪದಕ ಗೆದ್ದ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅದೃಷ್ಟ ಇವರದ್ದಾಗಿದೆ.
ಬೆಂಗಳೂರು: ನಿರಂಜನ್ ಮುಕುಂದನ್ ಇದೀಗ ಓರ್ವ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಬೆಳೆದು ನಿಂತಿದ್ದಾರೆ. ಆದರೆ Spina Bifida ಎಂಬ ಸಮಸ್ಯೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ನಿರಂಜನ್ ಮುಕುಂದನ್ ಅವರ ಹಾದಿ ಸುಲಭವಾಗಿರಲಿಲ್ಲ. ಸತತ ಪರಿಶ್ರಮದ ಫಲವಾಗಿ ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂಜನ್ ಪದಕಗಳ ಭೇಟೆಯಾಡಿದ್ದಾರೆ.
ನಿರಂಜನ್ ಮುಕುಂದನ್ ಅವರಿಗೆ 2015 ರಲ್ಲಿ ಭಾರತ ಸರ್ಕಾರವು ವರ್ಷದ ಶ್ರೇಷ್ಠ ಕ್ರೀಡಾಪಟು ಎಂದು ಗೌರವಿಸಿದೆ. 2016 ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ, ಚೇಂಜ್ ಮೇಕರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿದೆ, ರೋಲ್ ಮಾಡೆಲ್ ಫಾರ್ ಯೂತ್ ಪ್ರಶಸ್ತಿಗಳು ದೊರಕಿವೆ. ಈಜಿನಲ್ಲಿ ಪದಕ ಗೆದ್ದ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅದೃಷ್ಟ ಇವರದ್ದಾಗಿದೆ. ಒಂದು ಕಾಲದಲ್ಲಿ ಇವರನ್ನು ಹೀಯಾಳಿಸಿದವರೇ ಈಗ ಹೊಗಳುವಂತೆ ಆಗಿದ್ದಾರೆ. ನಿಮ್ಮ ಸಾಧನೆಗೆ ಹ್ಯಾಟ್ಸ್ ಆಫ್ ನಿರಂಜನ್ ಮುಕುಂದನ್..