ವಿಂಬಲ್ಡನ್ ಟೂರ್ನಿಯಲ್ಲಿ ಮತ್ತೊಂದು ಶಾಕ್ ಕೊಟ್ಟ 15ರ ಹುಡುಗಿ ಕೋಕೋ ಗಫ್..!


ಜಗತ್ತಿನ ನಾನಾ ಮೂಲೆಗಳಿಂದ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಸುದ್ದಿಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 15ರ ಬಾಲೆ ಕೋಕೋ ಗಫ್ ವಿಂಬಲ್ಡನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿ ಅಚ್ಚರಿ ಬರೆದಿದ್ದರೆ, 
ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ನೆದರ್’ಲ್ಯಾಂಡ್ ಫೈನಲ್ ಪ್ರವೇಶಿಸಿದೆ. ಇನ್ನು ಹಲವು ಕ್ರೀಡಾ ಸುದ್ದಿಗಳು ನಿಮಗಾಗಿ ಇಲ್ಲಿವೆ ನೋಡಿ..

Share this Video
  • FB
  • Linkdin
  • Whatsapp

15 ವರ್ಷದ ಕೋಕೋ ಗಫ್ ವಿಂಬಲ್ಡನ್ ಟೂರ್ನಿಯಲ್ಲಿ ತಮ್ಮ ಅದ್ಭುತ ಪ್ರದರ್ಶನ ಪ್ರದರ್ಶನ ಮುಂದುವರೆಸಿದ್ದು, 2017ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಸ್ಲೋವೆಂಕಿಯಾದ ಮ್ಯಾಗಡಲೇನಾ ರೈಬ್ರಿಕೊವಾ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. 1991ರ ಬಳಿಕ ವಿಂಬಲ್ಡನ್ ಆಡುತ್ತಿರುವ ಅತಿ ಕಿರಿಯ ಆಟಗಾರ್ತಿ ಎನಿಸಿರುವ ಅಮೇರಿಕಾದ ಗಫ್, ಈಗಾಗಲೇ 5 ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್’ಗೆ ಮೊದಲ ಸುತ್ತಿನಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. 

Related Video