BIG 3: ಕೆಸರುಗದ್ದೆಯಾಗಿರುವ ಸ್ಟೇಡಿಯಂ, ಅಧಿಕಾರಿಗಳಿಂದ ಶೀಘ್ರ ಕ್ರಮದ ಭರವಸೆ
ಇಲ್ಲೊಂದು ಸ್ಟೇಡಿಯಂ ಇದೆ. ಇದು ಆರಂಭವಾಗಿದ್ದು 1999ರಲ್ಲಿ. ಸ್ಟೇಡಿಯಂ ಆರಂಭವಾಗಿ ಎರಡು ದಶಕಗಳಾದರೂ ಕಾಮಗಾರಿ ನಡೆಯುತ್ತಲೇ ಇದೆ. ಇದು ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದ ಪರಿಸ್ಥಿತಿ. ಮಳೆ ಬಂದ್ರೆ ಈ ಜಿಲ್ಲಾ ಕ್ರೀಡಾಂಗಣ ಗೆದ್ದೆಯಾಗುತ್ತೆ. ಈ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ರುಪಾಯಿ ಖರ್ಚು ಮಾಡಿದ್ರೂ ಪರಿಸ್ಥಿತಿ ಬದಲಾಗಿಲ್ಲ. ಈ ವಿಚಾರವನ್ನು ಬಿಗ್ 3 ಕೈಗೆತ್ತಿಕೊಂಡಿದ್ದು, ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಬರವಸೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಚಾಮರಾಜನಗರ(ಆ.12): ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ಬೆರಳೆಣಿಕೆಯಷ್ಟು ಪದಕ ಗೆದ್ದಾಗ ನೂರಾರು ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ನಮ್ಮವರು ಗೆದ್ದಿದ್ದು ಕೇವಲ ಇಷ್ಟೇ ಪದಕವಾ ಎಂದು ಹುಬ್ಬೇರಿಸುತ್ತೇವೆ. ಆದರೆ ನಮ್ಮ ದೇಶದಲ್ಲಿ ಕೆಲವು ಬೇಜಬ್ದಾರಿ ಅಧಿಕಾರಿಗಳು ಹಾಗೂ ನಮ್ಮನ್ನಾಳುವ ನಿಷ್ಕ್ರಿಯ ಜನಪ್ರತಿನಿಧಿಗಳ ಕೆಲಸ ನೋಡಿದರೇ ನಿಮಗೆ ಅಚ್ಚರಿ ಎನಿಸದೇ ಇರಬಹುದು.
ಹೌದು, ಇಲ್ಲೊಂದು ಸ್ಟೇಡಿಯಂ ಇದೆ. ಇದು ಆರಂಭವಾಗಿದ್ದು 1999ರಲ್ಲಿ. ಸ್ಟೇಡಿಯಂ ಆರಂಭವಾಗಿ ಎರಡು ದಶಕಗಳಾದರೂ ಕಾಮಗಾರಿ ನಡೆಯುತ್ತಲೇ ಇದೆ. ಇದು ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದ ಪರಿಸ್ಥಿತಿ. ಮಳೆ ಬಂದ್ರೆ ಈ ಜಿಲ್ಲಾ ಕ್ರೀಡಾಂಗಣ ಗೆದ್ದೆಯಾಗುತ್ತೆ. ಈ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ರುಪಾಯಿ ಖರ್ಚು ಮಾಡಿದ್ರೂ ಪರಿಸ್ಥಿತಿ ಬದಲಾಗಿಲ್ಲ. ಈ ವಿಚಾರವನ್ನು ಬಿಗ್ 3 ಕೈಗೆತ್ತಿಕೊಂಡಿದ್ದು, ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಬರವಸೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ