Asianet Suvarna News Asianet Suvarna News

BIG 3: ಮಾಜಿ ಪೈಲ್ವಾನರಿಗಿಲ್ಲ ಮಾಶಾಸನ, ಕೇಳೋರಿಲ್ಲ ಅವ್ರ ಗೋಳನ್ನ!

ಗದಗ ಜಿಲ್ಲೆಯ ಅಂದಾಜು 120 ಮಾಜಿ ಪೈಲ್ವಾನರಿಗೆ 6 ತಿಂಗ ಳಿಂದ ಮಾಸಾಶನ ನೀಡಿಲ್ಲ. ಕೆಲ ಕಬ್ಬಡ್ಡಿ ಆಟಗಾರರಿಗೂ ಬರಬೇಕಾಗಿರೋ ಹಣ ಬಂದಿಲ್ಲ.. ಹೀಗಾಗಿ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ.

ಗದಗ(ಜ.05) ಅವರೆಲ್ಲಾ ಯೌವ್ವನದಲ್ಲಿ ಜಟ್ಟಿಗಳನ್ನ ಚಿತ್ ಮಾಡಿದವರು. ಕುಸ್ತಿ ಕಣದಲ್ಲಿ ತೊಡೆತಟ್ಟಿ ಸೈ ಎನಿಸಿಕೊಂಡವರು. ಚಿನ್ನ, ಬೆಳ್ಳಿ, ಕಂಚು ಪದಕಗಳನ್ನ ಮುಡಿಗೇರಿಸಿಕೊಂಡವರು.ಕುದಿ ಯೌವ್ವನದಲ್ಲಿ ಅಬ್ಬರಿಸಿದ್ದ ತೋಳುಗಳು ಈಗ ದುರ್ಬಲವಾಗಿವೆ. ನಾವು ಇದ್ದೀವಿ ಅಂತಾ ಭರವಸೆ ನೀಡಿದ್ದ ಸರ್ಕಾರವೂ ಈಗ ಸೈಲೆಂಟ್ ಆಗಿದೆ.. ಭವಿಷ್ಯದ ಭರವಸೆಯೇ ಇಲ್ಲದೇ ಆ ಜಟ್ಟಿಗಳು ಬೀದಿ ಅಲಿಯುವ ಪರಿಸ್ಥಿತಿ ಎದುರಾಗಿದೆ. ಏನ್ ಕಾರಣ ಗೊತ್ತಾ..? ಈ ರಿಪೋರ್ಟ್ ನೋಡಿ.... 

ಹೀಗೇ ತಲೆಗೆ ಪೇಟ. ಮುಖದಲ್ಲಿ ನೋವು, ಆಕ್ರೋಶ.. ತೋಳಲ್ಲಿ ಮೊದಲಿನ ಬಲ ಇಲ್ಲದಿದ್ರೂ ಜೀವನ ಉತ್ಸಾಹ ಕುಂದಿಲ್ಲ.. ನಮ್ಮ ಹಕ್ಕು ನಮಗೆ ಕೊಡಿ ಅನ್ನೋ ಹೋರಾಟ ಬಿಟ್ಟಿಲ್ಲ. ಯೆಸ್, ಹೀಗೆ ಬೀದಿಯಲ್ಲಿ ಕುಸ್ತಿ ಆಡ್ತಿರೋ ಇವ್ರೆಲ್ಲ ಮಾಜಿ ಪೈಲ್ವಾನರು..ತಮಗೆ ಬರಬೇಕಿದ್ದ ಮಾಸಾಸನ ಬಂದಿಲ್ಲ ಅಂತಾ ರೊಚ್ಚಿಗೆದ್ದಿರೋ ಇವ್ರೆಲ್ಲ ಜಿಲ್ಲಾಧಿಕಾರಿಗಳ ಕಚೇರಿ ಅಂಗಳದಲ್ಲೇ ಕುಸ್ತಿಗೆ ಇಳಿದಿದಾರೆ.ಕೈಯಲ್ಲಿ ಶಕ್ತಿ ಇದ್ದಾಗ ಕುಸ್ತಿ ಆಡಿ ಜನರನ್ನ ರಂಜಿಸಿದ್ವಿ.ಈಗ ಸರ್ಕಾರದೊಂದಿಗೆ ಕುಸ್ತಿ ಆಡಿ,ಮಾಶಾಸನ ಪಡೀಬೇಕು ಅನ್ನೋ ಅಳಲು ಪೈಲ್ವಾನರನ್ನ ಕಾಡ್ತಿದೆ.

Rishabh Pant car accident: ಡೆಹರಾಡೂನ್‌ನಿಂದ ಪಂತ್‌ ಮುಂಬೈಗೆ ಶಿಫ್ಟ್‌; ವಿದೇಶದಲ್ಲಿ ಚಿಕಿತ್ಸೆಗೆ ಚಿಂತನೆ?

ಅಷ್ಟಕ್ಕೂ, ಈ ದೃಶ್ಯ ಕಂಡು  ಬಂದಿದ್ದು ಗದಗ ಜಿಲ್ಲೆಯಲ್ಲಿ. ಗದಗ ಜಿಲ್ಲೆಯ ಅಂದಾಜು 120 ಮಾಜಿ ಪೈಲ್ವಾನರಿಗೆ 6 ತಿಂಗ ಳಿಂದ ಮಾಸಾಶನ ನೀಡಿಲ್ಲ. ಕೆಲ ಕಬ್ಬಡ್ಡಿ ಆಟಗಾರರಿಗೂ ಬರಬೇಕಾಗಿರೋ ಹಣ ಬಂದಿಲ್ಲ.. ಹೀಗಾಗಿ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ.

ಈ ವಿಚಾರವನ್ನು ಕೈಗೆತ್ತಿಕೊಂಡ ಬಿಗ್ 3 ತಂಡವು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್‌ 3 ವರದಿ ಬೆನ್ನಲ್ಲೇ ಗದಗ ಜಿಲ್ಲಾಡಳಿತ ಕೂಡಾ ಎಚ್ಚೆತ್ತುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ